ಬೆಂಗಳೂರು:
ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆದ ‘ನೀಟ್’ ಪರೀಕ್ಷೆಯ ಫಲಿತಾಂಶ ಇಂದು (ಜೂನ್ 5) ಮಧ್ಯಾಹ್ನದ ನಂತರ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವೆಬ್‌ಸೈಟ್‌ನಲ್ಲಿ (https://ntaneet.nic.in) ಪ್ರಕಟವಾಗಲಿದೆ.
ಒಡಿಶಾ ಹೊರತುಪಡಿಸಿ ಉಳಿದೆಡೆ ದೇಶಾದ್ಯಂತ ಮೇ 5 ರಂದು ನೀಟ್ ಯುಜಿ ಪರೀಕ್ಷೆ ನಡೆದಿತ್ತು. ದೇಶದ 147 ನಗರಗಳ 2492 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಬಳಿಕ ಮೇ 20ರಂದು ಒಡಿಶಾ, ಬೆಂಗಳೂರು ಹಾಗೂ ಸಿಲಿಗುರಿಯಲ್ಲಿ ಪರೀಕ್ಷೆ ನಡೆದಿತ್ತು. ಸುಮಾರು 13 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಮೂರು ಗಂಟೆಗಳ ಕಾಲ ಪೆನ್ ಹಾಗೂ ಪೇಪರ್ ಮೋಡ್‌ನಲ್ಲಿ ಪರೀಕ್ಷೆ ನಡೆದಿತ್ತು.
ನೀಟ್ ಯುಜಿ 2019 ನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಖಿಲ ಭಾರತ ಕೋಟಾದಡಿ ಸೀಟ್‌ಗಳನ್ನು ಅಂತಿಮಗೊಳಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








