ನವದೆಹಲಿ :
ಬಹು ನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ನೀಟ್-2020 ಫಲಿತಾಂಶವನ್ನು nta.ac.in ಮತ್ತು ntaneet.nic.in ತನ್ನ ಅಧಿಕೃತ ವೆಬ್’ಸೈಟ್ ಗಳಲ್ಲಿ ಶುಕ್ರವಾರ ಪ್ರಕಟಿಸಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್’ಸೈಟ್ ntaneet.nic.in ಮೂಲಕ ಪರೀಕ್ಷೆ ಫಲಿತಾಂಶವನ್ನ ಪರಿಶೀಲಿಸಬಹುದಾಗಿದ್ದು, ಫಲಿತಾಂಶ ನೋಡಲು ಈ ಕೆಳಗಿನ ಕ್ರಮಗಳನ್ನ ಅನುಸರಿಸಿ..!
- ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ – ntaneet.nic.in
- ಮುಖಪುಟದಲ್ಲಿ, ‘ನೀಟ್ (ಯುಜಿ) – 2020 ಫಲಿತಾಂಶ’ ಎಂದು ಹೇಳುವ ಲಿಂಕ್ ಮೇಲೆ
- ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಸಬ್ ಮಿಟ್ ಮೇಲೆ
- ನಿಮ್ಮ NEET 2020 ಫಲಿತಾಂಶಗಳು ಈಗ ನಿಮ್ಮ ಸ್ಕ್ರೀನ್ ನಲ್ಲಿ ಪ್ರದರ್ಶಿಸಲ್ಪಡುತ್ತದೆ.
- ನಿಮ್ಮ NEET 2020 ಫಲಿತಾಂಶವನ್ನು ಡೌನ್ ಲೋಡ್ ಮಾಡಿ. ಭವಿಷ್ಯದ ಅಗತ್ಯಕ್ಕಾಗಿ ತಪ್ಪದೇ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ನೀಟ್-2020 ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಸಾಮಾನ್ಯ/ಮೀಸಲು ರಹಿತ ವರ್ಗದ ವಿದ್ಯಾರ್ಥಿಗಳು ಕನಿಷ್ಠ 50ನೇ ಪರ್ಸೆಂಟ್ ಅಂಕಗಳನ್ನು ಗಳಿಸಬೇಕು. ಮೀಸಲು ವಿಭಾಗಗಳಲ್ಲಿ ಅರ್ಹತೆ ಪಡೆದ ನೀಟ್ ಅಂಕಗಳು ಮತ್ತು ಕನಿಷ್ಠ 40ನೇ ಪರ್ಸೆಂಟ್ ಅಂಕಗಳು ಬೇಕು..ರ್ಯಾಂಕಿಂಗ್ ಪಟ್ಟಿ ಯ ಆಧಾರದ ಮೇಲೆ ಕೌನ್ಸೆಲಿಂಗ್ ನಡೆಯಲಿದೆ. ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ಬದಲಾಗಿ ರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಸಿ) ಈ ಕೌನ್ಸೆಲಿಂಗ್ ಗೆ ಚಾಲನೆ ನೀಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ