ನವದೆಹಲಿ:
ನೀಟ್-ಪಿಜಿ ಪರೀಕ್ಷೆಯನ್ನ ಕನಿಷ್ಠ 4 ತಿಂಗಳ ಕಾಲ ಮುಂದೂಡಲಾಗುವುದು ಎಂದು ಕೇಂದ್ರ ಸೋಮವಾರ ಘೋಷಿಸಿದೆ.
ದೇಶದ ಕೋವಿಡ್-19 ಪರಿಸ್ಥಿತಿಯ ವಿರುದ್ಧ ಹೋರಾಡಲು ಹೆಚ್ಚಿನ ಸಿಬ್ಬಂದಿ ಲಭ್ಯವಾಗುವಂತೆ ಮಾಡುವ ಪ್ರಯತ್ನದಲ್ಲಿ‘ನೀಟ್-ಪಿಜಿಯನ್ನ ಕನಿಷ್ಠ 4 ತಿಂಗಳವರೆಗೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮತ್ತು ಪರೀಕ್ಷೆ 31 ಆಗಸ್ಟ್ 2021ರ ಮೊದಲು ಇರುವುದಿಲ್ಲ. ಪರೀಕ್ಷೆ ನಡೆಸುವ ಮೊದಲು ಪ್ರಕಟಣೆಯ ನಂತರ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಸಮಯವನ್ನ ಸಹ ನೀಡಲಾಗುತ್ತದೆ. ಇದರಿಂದ ಕೋವಿಡ್ ಕರ್ತವ್ಯಗಳಿಗೆ ಹೆಚ್ಚಿನ ಸಂಖ್ಯೆಯ ಅರ್ಹ ವೈದ್ಯರು ಲಭ್ಯರಾಗಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ನೀಟ್-ಪಿಜಿ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ