ಕಠ್ಮಂಡು:
ನೇಪಾಳದ ಧಂಡಿಗ್ ಜಿಲ್ಲೆಯ ನೌಬೈಸ್ ನಲ್ಲಿ ಬೆಳಗ್ಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 5.2 ರಷ್ಟು ತೀವ್ರತೆಯ ಕಂಪನ ಆಗಿದೆ ಎಂದು ಅಲ್ಲಿನ ಭೂ ವಿಜ್ಞಾನ ಸಂಸ್ಥೆ ಹೇಳಿದೆ.
EMSC: An earthquake with a magnitude of 4.8 on the Richter Scale hit Kathmandu, Nepal at 6:14 AM today.
— ANI (@ANI) April 24, 2019
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ 6.14ಕ್ಕೆ ಒಮ್ಮೆ ಭೂಮಿ ಕಂಪಿಸಿದ್ದು, ಬಳಿಕ ದಾಂಡಿಂಗ್ ಜಿಲ್ಲೆಯ ನೌಬೀಸ್ನಲ್ಲಿ ಬೆಳಗ್ಗೆ 6.29ಕ್ಕೆ ಮತ್ತು 6.40ಕ್ಕೆ ಎರಡು ಬಾರಿ ಭೂಮಿ ಕಂಪನಿಸಿದೆ.
National Emergency Operation Centre, Nepal: Earthquakes with magnitudes of 5.2 and 4.3 hit Naubise in Dhading District at 6:29 AM and 6:40 AM respectively, today. #Nepal
— ANI (@ANI) April 24, 2019
ಮೊದಲ ಕಂಪನ 5.2 ತೀವ್ರತೆಯದ್ದಾಗಿದ್ದರೆ, ಎರಡನೆಯ ಕಂಪನದ ತೀವ್ರತೆ 4.3 ಇತ್ತು ಎನ್ನಲಾಗಿದೆ. ಒಟ್ಟು ಮೂರು ಕಡೆ ಭೂಕಂಪನವಾಗಿದ್ದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದರಿಂದಾಗಿ ದೇಶಾದ್ಯಂತ ಅಲ್ಲಿನ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ