ಸುಪ್ರೀಂನ ತ್ರಿಸದಸ್ಯ ಪೀಠ ಕಳೆದ ವರ್ಷದ ಸೆಪ್ಟೆಂಬರ್ 27ರಂದು ಉನ್ನತ ಪೀಠಕ್ಕೆ ವರ್ಗಾವಣೆ ಮಾಡದಿರಲು ನಿರ್ಧರಿಸಿತ್ತು. 1994ರಲ್ಲಿ ಮಸೀದ ಮುಸ್ಲಿಮರ ಅವಿಭಾಜ್ಯ ಅಂಗವಲ್ಲ ಎಂದು ತೀರ್ಪು ನೀಡಿತ್ತು.
2010ರ ಅಲಹಾಬಾದ್ ಕೋರ್ಟ್ ಪ್ರಶ್ನಿಸಿ ಸುಮಾರು ಹದಿನಾಲ್ಕು ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. 2.77 ಎಕರೆಯಷ್ಟು ಜಾಗ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾಗೆ ಸೇರಿದ್ದು ಎಂದು ತೀರ್ಪು ನೀಡಿತ್ತು.
ಸದ್ಯ ಈ ತೀರ್ಪಿಗೆ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಯನ್ನು ಜನವರಿ ಮೊಲದ ವಾರ ವಿಚಾರಣೆ ನಡೆಸುವುದಾಗಿ ಅಕ್ಟೋಬರ್ 29ರಂದು ಸುಪ್ರೀಂ ಹೇಳಿತ್ತು.
ಇದರ ನಡುವೆ ಅಯೋಧ್ಯ ರಾಮ ಜನ್ಮಭೂಮಿ ವಿವಾದವನ್ನು ಶೀಘ್ರ ವಿಚಾರಣೆ ನಡೆಸಬೇಕು ಎನ್ನುವ ಉತ್ತರ ಪ್ರದೇಶ ಸರ್ಕಾರ ಮನವಿಯನ್ನು ಸುಪ್ರೀಂ ತಳ್ಳಿ ಹಾಕಿತ್ತು.
ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಕೇಳಿ ಬಂದಿದೆ. ಸಂಘ ಪರಿವಾರ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನನ್ನು ಜಾರಿಗೆ ಒತ್ತಾಯಿಸಿವೆ. ಐವರು ನ್ಯಾಯಮೂರ್ತಿಗಳ ಪೀಠದಿಂದ ಜ. 10ಕ್ಕೆ ಅಯೋಧ್ಯಾ ಪ್ರಕರಣ ವಿಚಾರಣೆ 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ