ನವದೆಹಲಿ:
ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಪೈಕಿ ಒಬ್ಬನಾದ ವಿನಯ್ ಶರ್ಮಾ ಜೈಲಿನಲ್ಲಿ ಗೋಡೆಗೆ ತಲೆ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮಾರ್ಚ್ 3 ರಂದು ನಾಲ್ವರು ಗ್ಯಾಂಗ್ ರೇಪಿಸ್ಟ್ ಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದೆಹಲಿ ಕೋರ್ಟ್ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಅಪರಾಧಿಗಳಲ್ಲೊಬ್ಬಾತ ವಿನಯ್ ಶರ್ಮಾ ಜೈಲ್ ನ ತನ್ನ ಕೊಠಡಿಯಲ್ಲಿ ಗೋಡೆಗೆ ತಲೆಗೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾನೆ.
ಗಾಯಗೊಂಡವರನ್ನು, ಅನಾರೋಗ್ಯಕ್ಕೆ ತುತ್ತಾದವರನ್ನು ಅವರು ಆರೋಗ್ಯವಂತರಾಗುವ ವರೆಗೂ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ. ಈ ಕಾನೂನಿನ ಲಾಭ ಪಡೆಯಲೆಂದು ಆರೋಪಿ ವಿನಯ್ ಶರ್ಮಾ ಗೋಡೆಗೆ ತಲೆ ಚಚ್ಚಿಕೊಂಡನೆ ಎಂಬ ಅನುಮಾನ ವ್ಯಕ್ತವಾಗಿದೆ.
ಇದಕ್ಕೂ ಮೊದಲು ವಿನಯ್ ಪರ ವಕೀಲರು ಆತ ಮಾನಸಿಕವಾಗಿ ಖಿನ್ನನಾಗಿದ್ದು, ಜೈಲ್ ನಲ್ಲಿ ಆತನ ಮೇಲೆ ಹಲ್ಲೆ ನಡೆದಿದೆ. ಇದರಿಂದ ಗಾಯಗೊಂಡಿದ್ದಾನೆ ಎಂದು ಕೋರ್ಟ್ ಮುಂದೆ ವಾದಿಸಿದ್ದರು. ಹೀಗಾಗಿ ಆತನ ಮೇಲೆ ನಿಗಾ ವಹಿಸುವಂತೆ ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
