ದೆಹಲಿ :
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದಿರುವ ನಾಲ್ವರು ಅಪರಾಧಿಗಳನ್ನು ಶೀಘ್ರವೇ ಗಲ್ಲಿಗೇರಿಸುವ ಸಾಧ್ಯತೆ ಇದೆ.
ಈ ಅಪರಾಧಿಗಳು ಕ್ಷಮಾದಾನ ಕೋರಿ ಅತ್ಯಾಚಾರಿಗಳು ರಾಷ್ಟ್ರಪತಿಗಳಿಗೆ ಇನ್ನೊಂದು ವಾರದಲ್ಲಿ ಮನವಿ ಸಲ್ಲಿಸದೇ ಇದ್ದಲ್ಲಿ ಶೀಘ್ರದಲ್ಲೇ ಅವರನ್ನು ನೇಣಿಗೇರಿಸಲಾಗುತ್ತದೆ ಅಂತಾ ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಅಪರಾಧಿಗಳಲ್ಲಿ ಮೂವರು ತಿಹಾರ್ ಜೈಲಿನಲ್ಲಿದ್ದು, ಇನ್ನೋರ್ವ ಅಪರಾಧಿ ಮಾಂಡೋಲಿಯ ಕಾರಾಗೃಹದಲ್ಲಿದ್ದಾನೆ. ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ನೀಡಿದ್ದ ಮರಣ ದಂಡನೆ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ ತಿಳಿಸಿದರು.
ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ರಾಷ್ಟ್ರಪತಿಗಳಲ್ಲಿ ಕ್ಷಮಾದಾನ ಕೋರಲು ಇನ್ನೊಂದು ವಾರ ಅವಕಾಶವಿದೆ. ಅಷ್ಟರಲ್ಲಿ ಮನವಿ ಸಲ್ಲಿಸದೇ ಇದ್ದಲ್ಲಿ ಗಲ್ಲು ಖಾಯಂ ಆಗಲಿದೆ. ಈ ಸಂಬಂಧ ನಾಲ್ವರಿಗೂ ಅ.28ರಂದೇ ನೋಟಿಸ್ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
