ನವದೆಹಲಿ:
ಪ್ರಧಾನಿ ಮೋದಿಯವರು ಮಂಗಳವಾರ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದಕ್ಕೆ ಸಂಬಂಧಪಟ್ಟಂತೆ ಈ ಆರ್ಥಿಕ ಪ್ಯಾಕೇಜ್ ದೇಶಾದ್ಯಂತ ಹೇಗೆ ಹಂಚಿಕೆಯಾಗುತ್ತದೆ? ಯಾವ್ಯಾವ ವರ್ಗಕ್ಕೆ ಎಷ್ಟು ಎಂಬಿತ್ಯಾದಿ ವಿಚಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಪ್ಯಾಕೇಜ್ಗೆ ಸಂಬಂಧಪಟ್ಟಂತೆ ಇಂದು 15 ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದರಲ್ಲಿ 6 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಪಟ್ಟದ್ದಾಗಿವೆ. ಎರಡು ಇಪಿಎಫ್ಗೆ, ಎರಡು ಎಚ್ಎಫ್ಸಿಎಸ್ ಮತ್ತು ಎಂಎಫ್ಐಎಸ್ಗೆ ಹಾಗೂ ಒಂದು ಡಿಸ್ಕಾಮ್ಗಳಿಗೆ, ಒಂದು ಗುತ್ತಿಗೆದಾರರು, ಒಂದು ರಿಯಲ್ ಎಸ್ಟೇಟ್ ಮತ್ತು ಇತರರಿಗೆ ಸಂಬಂಧಪಟ್ಟದ್ದು ಎಂದು ತಿಳಿಸಿದರು.
- ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು ಮತ್ತು ಅದಕ್ಕಾಗಿಯೇ ಈ ಮಿಷನ್ ಅನ್ನು ‘ಆತ್ಮನಿರ್ಭಾರ ಭಾರತ್ ಅಭಿಯಾನ್’ ನೆರವು
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ. ಇದರಿಂದ 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಲಾಭ
- 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ವಾಪಸು
- 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ವಾಪಸು ಆದಾಯ ತೆರಿಗೆ ಪಾವತಿ ಮಾಡಿದ್ದ 18,000 ಕೋಟಿ ರೂ.ಗಳ ಮರುಪಾವತಿ, 40 ಲಕ್ಷ ತೆರಿಗೆದಾರರ ಲಾಭ
- 2020 ರ ಅಕ್ಟೋಬರ್ 31 ರವರೆಗೆ 100 ಕೋಟಿ ರೂ.ಗಳ ವಹಿವಾಟು ಹೊಂದಿರುವ ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ರೂ.ಗಳ ಮೇಲಾಧಾರ ರಹಿತ ಸಾಲ
- ATM ಹಣ ವಿತ್ ಡ್ರಾ ಮಾಡಲು ಶುಲ್ಕವಿಲ್ಲ
- 50,000 ಕೋಟಿ ರೂ. ಫಂಡ್ ಆಫ್ ಫಂಡ್ ಮೂಲಕ ಎಂಎಸ್‌ಎಂಇಗಳಿಗೆ ಈಕ್ವಿಟಿ ಇನ್ಫ್ಯೂಷನ್; ಮದರ್ ಫಂಡ್ ಮತ್ತು ಕೆಲವು ಮಗಳು ಫಂಡ್‌ಗಳ ಮೂಲಕ ನಿರ್ವಹಿಸುವುದು; ಇದು ಎಂಎಸ್‌ಎಂಇ ಗಾತ್ರ ಮತ್ತು ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ
- ಒತ್ತಡಕ್ಕೊಳಗಾದ ಎಂಎಸ್‌ಎಂಇಗಳನ್ನು ಈಕ್ವಿಟಿ ಬೆಂಬಲದೊಂದಿಗೆ ಒದಗಿಸಲು ಸರ್ಕಾರ ಮುಂದಾಗಿದ್ದು, ಅಧೀನ ಸಾಲವಾಗಿ 20,000 ಕೋಟಿ ರೂ ನೀಡಲಾಗುವುದು
- ಸ್ಥಳೀಯ ಬ್ರಾಂಡ್‌ಗಳನ್ನು ಜಾಗತಿಕ ಮಟ್ಟಕ್ಕೆ ತರಲಾಗುವುದು
- ಜಿಎಸ್‌ಟಿ ಜಾರಿ, ವಿದ್ಯುತ್ ವಲಯದಲ್ಲಿ ಭಾರೀ ಬದಲಾವಣೆ
- 52 ಸಾವಿರ ಕೋಟಿ ರೂ. ಹಣವನ್ನು ಜನಧನ ಖಾತೆಗೆ ವರ್ಗಾಯಿಸಲಾಗಿದೆ. 41 ಕೋಟಿ ಜನಧನ ಖಾತೆಗೆ ಹಣ ವರ್ಗಾಯಿಸಲಾಗಿದೆ.
- ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆ ಜಾರಿ
- ಲಾಕ್‌ಡೌನ್ ವೇಳೆಯೂ ನೇರ ಹಣ ವರ್ಗಾವಣೆ ಲಾಕ್‌ಡೌನ್ ಬಳಿಕ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ
ಹಾಗೇ ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ನೆರವು ನೀಡಲಾಗಿದೆ. ಹಾಗೇ ಉಜ್ವಲಾ ಯೋಜನೆ ಮೂಲಕ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. ಈ ಯೋಜನೆ ಇಲ್ಲದಿದ್ದರೆ ಅವರಿಗೆ ಗ್ಯಾಸ್ ಸಿಗುತ್ತಿರಲಿಲ್ಲ. ಬಡವರಿಗೆ 71 ಸಾವಿರ ಟನ್ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ