ದೆಹಲಿ :
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿರುವ ಸಗಣಿಯಿಂದ ಮಾಡಿದ ಸೋಪ್ ಹಾಗೂ ಬಿದಿರು ಬಳಸಿ ಮಾಡಿರುವ ನೀರಿನ ಬಾಟಲಿಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ಬಿಡುಗಡೆ ಮಾಡಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಯೋಗ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅದರಲ್ಲೂ, ಸಾವಯವ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ’ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 2, ಮಹಾತ್ಮಾಗಾಂಧಿ 150ನೇ ಜನ್ಮದಿನವಾದ ಇಂದಿನಿಂದ ದೇಶದಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿದೆ. ಈ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಿದೆ. ಇದೇ ವೇಳೆ ಸರ್ಕಾರ, ಖಾದಿ ಗ್ರಾಮೋದ್ಯೋಗದಲ್ಲಿ ಹೆಚ್ಚೆಚ್ಚು ಉದ್ಯೋಗ ನೀಡುವ ಭರವಸೆ ನೀಡಿದೆ. ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಹೊಂದಿದೆ. ಈ ಕೇಂದ್ರದಲ್ಲಿ ಬಿದಿರಿನ ಬಾಟಲಿ, ಸಗಣಿ ಸೋಪ್, ಶಾಂಪೂಗಳನ್ನು ಖರೀದಿ ಮಾಡಬಹುದಾಗಿದೆ.
Delhi: Union Minister Nitin Gadkari launched a special sales campaign of Khadi and Village Industries Commission & launched cow dung soaps and bamboo bottles yesterday, on the eve of #GandhiJayanti pic.twitter.com/T8UUJRWYBI
— ANI (@ANI) October 2, 2019
ಗೋಮೂತ್ರ ಹಾಗೂ ಸಗಣಿ ಬಳಸಿ ಸೋಪನ್ನು ತಯಾರಿಸಲಾಗಿದ್ದು, ಎಲ್ಲ ಪರೀಕ್ಷೆಗಳಲ್ಲಿ ಯಶಸ್ವಿಯಾದ ನಂತರ ಸೋಪನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದು ಚರ್ಮಕ್ಕೆ ಬಹಳ ಒಳ್ಳೆಯದು. 125 ಗ್ರಾಂ ಸೋಪ್ ಬೆಲೆ 125 ರೂಪಾಯಿ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








