ಯುವಕನಿಗೆ 7 ದಿನ ಶೌಚಾಲಯದಲ್ಲಿ ಕ್ವಾರಂಟೈನ್!!

ಜಗತ್ಸಿಂಗ್‌ಪುರ (ಒಡಿಶಾ):

      28 ವರ್ಷದ ಯುವಕನೊಬ್ಬ ಶೌಚಾಲಯದೊಳಗೆ ಹೋಮ್​ ಕ್ವಾರಂಟೈನ್ ಕಳೆದ ಘಟನೆ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ.

      ಬೇರೆ ರಾಜ್ಯಗಳಿಂದ ಒಡಿಶಾಗೆ ಬಂದವರು 14 ದಿನಗಳು ಕ್ವಾರಂಟೈನ್​ನಲ್ಲಿ ಕಳೆಯುವುದು ಕಡ್ಡಾಯವಾಗಿದೆ. ಇದರಲ್ಲಿ ಏಳು ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್​ ಹಾಗೂ ಉಳಿದ ಏಳು ದಿನ ಹೋಮ್​ ಕ್ವಾರಂಟೈನ್​ನಲ್ಲಿರುವಂತೆ ನಿಯಮ ರೂಪಿಸಲಾಗಿದೆ.

     ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಮ್ ಕ್ವಾರಂಟೈನ್ ಆಗಬೇಕೆಂಬ ನಿಯಮವಿರುವುದರಿಂದ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ವ್ಯಕ್ತಿ ಹೋಮ್ ಕ್ವಾರಂಟೈನ್ ಆಗಲು ಮನೆಗೆ ತೆರೆಳಿದ್ದು, ಆತನ ಮನೆಯಲ್ಲಿ ಈಗಾಗಲೇ ಆರು ಮಂದಿ ವಾಸವಿದ್ದು, ಕ್ವಾರಂಟೈನ್​ನಲ್ಲಿರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಮನೆ ಚಿಕ್ಕದಿರುವುದರಿಂದ ತನ್ನ ಮನೆಯ ಸಮೀಪದಲ್ಲಿಯೇ ಇದ್ದ, ಹೊಸದಾಗಿ ನಿರ್ಮಿಸಿದ್ದ, ಸ್ವಚ್ಚ ಭಾರತ ಶೌಚಾಲಯದಲ್ಲಿ7 ದಿನ ಜೀವನ ಕಳೆದಿದ್ದಾನೆ.

     ಮನೆಯವರ ಸುರಕ್ಷತೆಗಾಗಿ ಶೌಚಾಲಯದಲ್ಲೇ ಕಾಲ ಕಳೆಯಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಅಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ಇದೀಗ ರೋಗ ಲಕ್ಷಣಗಳು ಕಾಣದ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap