ಶ್ರೀನಗರ:
ಬೆಂಕಿಯ ನಡುವೆ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಲು ತನ್ನ ಜೀವದ ಹಂಗು ತೊರೆದು ಹೋಗಿದ್ದ ಸೇನಾಧಿಕಾರಿ ಸಾವನ್ನಪ್ಪಿರುವ ಘಟನೆ ಕಾಶ್ಮಿರದಲ್ಲಿ ನಡೆದಿದೆ.
ಅಂಕಿತ್ ಬುದರಾಜ್ ಅಗ್ನಿಗಾಹುತಿಯಾದ ಸೇನಾಧಿಕಾರಿ. ಗುಲ್ಮಾರ್ಗ್ ನ ಎಸ್ ಎಸ್ ಟಿಸಿ ಗೆ ಹೊಂದಿಕೊಂಡಂತಿರುವ ಅಧಿಕಾರಿಯ ಟೆಂಟ್ ಗೆ ಕಳೆದ ರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅವರು ತಮ್ಮ ಪತ್ನಿ ಮತ್ತು ನಾಯಿಯೊಂದನ್ನು ಬೆಂಕಿಯಿಂದ ರಕ್ಷಿಸಿದರು. ಇನ್ನೊಂದು ನಾಯಿ ರಕ್ಷಿಸುವ ವೇಳೆ ಶೇ.90ರಷ್ಟು ಸುಟ್ಟಗಾಯಗಳಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೇನಾ ಅಧಿಕಾರಿ ಮೃತದೇಹವನ್ನು ಉಪನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
