ಟೋಕಿಯೋ ಒಲಂಪಿಕ್ಸ್ : ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ!!

ಟೋಕಿಯೊ : 

       ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ಭಾರತದ ಕುಸ್ತಿಪಟು ರವಿ ದಹಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. 

      ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ರಷ್ಯಾದ ಜಾವೂರ್ ಯುಗುಯೆವ್ ಜೊತೆ ರವಿ ಫೈನಲ್ ನಲ್ಲಿ ಸೆಣೆಸಾಡಿದ್ರು. ಜಾವೂರ್ ವಿರುದ್ಧ 4-7 ಅಂಕದಿಂದ ರವಿ ಸೋಲುಂಡಿದ್ದಾರೆ.

      ನಾಲ್ಕನೇ ಶ್ರೇಯಾಂಕದ ರವಿ ದಹಿಯಾ, ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ರವಿ ಒಂದು ಹಂತದಲ್ಲಿ 8 ಅಂಕಗಳಷ್ಟು ಹಿಂದುಳಿದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ರವಿ, ನುರಿಸ್ಲಾಮ್ ಸೋಲಿಸಿ ಫೈನಲ್ ಪ್ರವೇಶ ಮಾಡಿ, ಪದಕ ಖಚಿತಪಡಿಸಿಕೊಂಡಿದ್ದರು.

      ಈ ಮೂಲಕ ಭಾರತಕ್ಕೆ ಎರಡು ಬೆಳ್ಳಿ ಪದಕ ಬಂದಂತಾಗಿದೆ. ರವಿ ಬೆಳ್ಳಿ ಗೆಲ್ಲುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವು 2 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 5 ಪದಕ ಗೆದ್ದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap