17 ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ!!!

ಹೊಸದಿಲ್ಲಿ:

      ಬಿಜೆಪಿ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

      17ನೇ ಲೋಕಸಭಾ ಕಲಾಪ ಸೋಮವಾರ ಆರಂಭವಾಗಿದ್ದು, ಎರಡನೇ ದಿನವಾದ ಮಂಗಳವಾರ ಬಿರ್ಲಾರನ್ನು ನೂತನ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. 

      ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಕೋಟ-ಬಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಓಂ ಬಿರ್ಲಾ ಕಾಂಗ್ರೆಸ್‌ನ ರಾಮನಾರಾಯಣ ಮೀನಾರನ್ನು 2.5 ಲಕ್ಷ ಮತಗಳ ಅಂತರದಿಂದ ಮಣಿಸಿದ್ದರು.

      ”ಇದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಕ್ಷಣ. ನನ್ನ ಪತಿಯನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿರುವ ಸಚಿವ ಸಂಪುಟಕ್ಕೆ ಕೃತಜ್ಞತೆ ಸಲ್ಲಿಸುವೆ” ಎಂದು ಓಂ ಬಿರ್ಲಾರ ಪತ್ನಿ ಅಮಿತಾ ಬಿರ್ಲಾ ಹೇಳಿದ್ದಾರೆ.

     ಈ ಹಿಂದೆ ಸುಮಿತ್ರಾ ಮಹಾಜನ್ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಮಹಾಜನ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.  ಓಂ ಬಿರ್ಲಾ ಅವರು ಸುಮಿತ್ರಾ ಮಹಾಜನ್‌ರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಲಿದ್ದಾರೆ. 

      56 ವರ್ಷದ ಬಿರ್ಲಾ, ಬಿಜೆಪಿ ಯೂತ್ ವಿಭಾಗದೊಂದಿಗೆ ನಿರಂತರ ಸಂಬಂಧ ಹೊಂದಿದ್ದು, ಸತತ ಎರಡು ಬಾರಿ ರಾಜಸ್ಥಾನ ಕೋಟಾದ ಶಾಸಕರಾಗಿದ್ದರು. ಅಲ್ಲದೆ ಬಿಜೆಪಿ ಹಿರಿಯ ನಾಯಕ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಆಪ್ತರಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap