ಕೊಲ್ಲಾಪುರ್ :
ಭಾರತದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಂಕಿತ ಕೊರೊನಾದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಮೃತ ಪಟ್ಟ ವ್ಯಕ್ತಿ ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದ್ದು, 68 ವರ್ಷ ವಯಸ್ಸಾಗಿದೆ. ಹರಿಯಾಣ, ದೆಹಲಿ, ಮುಂಬೈ ಹಾಗೂ ಪುಣೆ ನಗರಗಳಿಗೆ ಭೇಟಿ ನೀಡಿ ಕೊಲ್ಲಾಪುರಕ್ಕೆ ಬಂದಿದ್ದರಂತೆ.
ಕೊಲ್ಲಾಪುರದ ಪ್ರಮೀಳ ರಾಜೆ ಆಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿ ವ್ಯಕ್ತಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಸ್ಯಾಂಪಲ್ ವರದಿ ಎರಡು ದಿನಗಳ ಬಳಿಕ ಬರಲಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ