ತಿರುಪತಿ:
ತಿರುಮಲ ಯಾತ್ರಿಕರಿಗೆ ಹೊಸ ವರ್ಷದ ಗಿಫ್ಟ್ ಕೊಡಲು ಟಿಟಿಡಿ ತೀರ್ಮಾನಿಸಿದ್ದು, ದೇವರ ದರ್ಶನಕ್ಕೆ ಬರುವ ಪ್ರತಿ ಭಕ್ತರಿಗೂ ಇನ್ನು ಮುಂದೆ ಉಚಿತ ಲಡ್ಡು ವಿತರಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಬರಿಗಾಲಲ್ಲಿ ಬೆಟ್ಟ ಏರುವವರಿಗೆ ಉಚಿತವಾಗಿ ಪ್ರಸಾದದ ರೂಪದಲ್ಲಿ ಒಂದು ಲಡ್ಡು ನೀಡಲಾಗುತ್ತಿದೆ. ತಿರುಮಲದಲ್ಲಿರುವ ತಿಮ್ಮಪ್ಪನ ದೇಗುಲದಲ್ಲಿ ನಿತ್ಯ ಸುಮಾರು 3 ಲಕ್ಷ ಲಡ್ಡುಗಳ ವಿತರಣೆಯಾಗುತ್ತಿದ್ದು, ಈ ಪೈಕಿ 80 ಸಾವಿರದಿಂದ 1 ಲಕ್ಷದವರೆಗೂ ಲಡ್ಡುಗಳನ್ನು ಉಚಿತವಾಗಿ ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.
ಹೆಚ್ಚುವರಿ ಲಡ್ಡುಗಳ ವಿತರಣೆಗೆಂದೇ ಟಿಟಿಡಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿದೆ. ಹೆಚ್ಚುವರಿ ಲಡ್ಡು ಪ್ರಸಾದಕ್ಕಾಗಿ ಪ್ರತಿ ಲಡ್ಡುವಿಗೆ 50 ರೂ. ನಿಗಧಿಪಡಿಸುವ ಉದ್ದೇಶವಿದೆ. ಈ ಮೊದಲು ಹೆಚ್ಚುವರಿ ಲಡ್ಡು ಪ್ರಸಾದ ಪಡೆಯಲು ಟಿಟಿಡಿ ಅಧಿಕಾರಿಗಳ ಅನುಮತಿ ಪತ್ರ ಪಡೆಯಬೇಕಿತ್ತು. ಹೊಸ ಯೋಜನೆಯಡಿ ಅನುಮತಿ ಪತ್ರದ ಅವಶ್ಯಕತೆ ಇರುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ