ಛತ್ತೀಸ್ ಗಢ:
ಛತ್ತೀಸ್ ಗಢ ರಾಜ್ಯದ ಬಿಜಾಪುರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ ಪಿಎಫ್)ನ ಯೋಧ ಹುತಾತ್ಮರಾಗಿದ್ದಾರೆ.
ಇಂದು ಮುಂಜಾನೆ 4 ಗಂಟೆಗೆ ನಕ್ಸಲೀಯರು ಇದ್ದಕ್ಕಿದ್ದಂತೆ ಗುಂಡಿನ ಚಕಮಕಿ ಆರಂಭಿಸಿದರು. ಹಲವಾರು ಗಂಟೆಗಳ ಕಾಲ ನಡೆದ ಈ ಎನ್ಕೌಂಟರ್ ಸಮಯದಲ್ಲಿ, ನಕ್ಸಲರು ಹಾರಿಸಿದ ಗುಂಡಿಗೆ ಸಿಆರ್ಪಿಎಫ್ ಯೋಧ ಸಾವನ್ನಪ್ಪಿದ್ದಾನೆ. ನಕ್ಸಲರ ವಿರುದ್ಧ ಸಿಆರ್‌ಪಿಎಫ್‌ನ ಶೋಧ ಕಾರ್ಯಾಚರಣೆ ಇನ್ನು ಮುಂದುವರೆದಿದೆ.
ಸಾವನ್ನಪ್ಪಿರುವ ಯೋಧ ಕೇಂದ್ರ ಮೀಸಲು ಪೊಲೀಸ್ ಪಡೆಯ 151 ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದಾರೆ ಮತ್ತು ರಾಜ್ಯ ಪೊಲೀಸರ ಪಡೆ, ಕಮಾಂಡೋ ಘಟಕದ ಜೊತೆಗೆ ನಕ್ಸಲ್ ಕಾರ್ಯಾಚರಣೆಗಾಗಿ ಈ ತಂಡವು ಹೊರಟಿದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ