ದೆಹಲಿ:
ಆನ್‌ಲೈನ್‌ನಲ್ಲಿ ಔಷಧ ಮಾರಾಟ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಇ – ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಸಂಬಂಧಿಸಿದ ಕಾನೂನಾತ್ಮಕ ನಿಯಮಗಳನ್ನು ಜನವರಿ 31 ರ ಒಳಗೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈ ಕೋರ್ಟ್ ಹೇಳಿದೆ. ಅಲ್ಲದೇ ಜನವರಿ 31 , 2019ರವರೆಗೂ ಮಾರಾಟ ನಿಷೇಧಿಸಿದೆ.
ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ಕಾನೂನು ಬದ್ಧಗೊಳಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಕಾಯಿದೆ ತಿದ್ದುಪಡಿಗೆ ಈಗಾಗಲೇ ಕರಡು ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.
ತಮಿಳುನಾಡಿನ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಪ್ರಾತಿನಿಧ್ಯ ವಹಿಸಿ ಕೆ.ಕೆ ಸೆಲ್ವಮ್ ಎನ್ನುವವರು ಆನ್ ಲೈನ್ ನಲ್ಲಿ ಔಷಧಗಳನ್ನು ಮನಬಂದಂತೆ ಮಾರಾಟ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಡಿವಾಣ ಹೇರಬೇಕು ಎಂದು ಮದ್ರಾಸ್ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಕೇಂದ್ರ ಸರ್ಕಾರ ಕಾನೂನಾತ್ಮಕ ನಿಯಮಗಳ ರೂಪಿಸುವ ಬಗ್ಗೆ ತಿಳಿಸಿ ಮಾರಾಟಕ್ಕೆ ನಿಷೇಧ ಹೇರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ