ಸಾಮಾಜಿಕ ಜಾಲತಾಣ ಹುಚ್ಚಿಗೆ ಮಹಿಳೆ ಆತ್ಮಹತ್ಯೆ

ಚಿಕ್ಕಬಳ್ಳಾಪುರ:

   ಸಾಮಾಜಿಕ ಜಾಲತಾಣದ ಹುಚ್ಚಿಗೆ ಗೃಹಿಣಿಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸ್ಮ್ಯುಯೆಲ್‌ ಆಪ್‌ ಬಳಸಿ ಹಾಡು ಹಾಡುತ್ತಿದ್ದ ಶಿಲ್ಪಾ ಎಂಬುವರು, ತನ್ನ ಜೊತೆ ಆಪ್‌ನಲ್ಲಿ ಹಾಡು ಹಾಡುತ್ತಿದ್ದ ಯುವಕ ಹಾಡಲು ಸ್ಪಂದಿಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
   ಶಿಲ್ಪಾ ನಗರದ 16ನೇ ವಾರ್ಡಿನ ಗರ್ಲ್ಸ್ ಸ್ಕೂಲ್ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು. ಶಿಲ್ಪಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.   ಗೃಹಿಣಿ ಶಿಲ್ಪಾ ಗೆ ಸ್ಮ್ಯುಯೆಲ್‌ ಆಪ್‌ನಲ್ಲಿ ಹಾಡುವ ಹುಚ್ಚು ಹತ್ತಿತ್ತು. ಆಕೆ ಹಾಸನದ ದೇವರಾಜ್ ಎಂಬಾತನ ಜೊತೆಗೆ ಹಾಡುಗಳನ್ನು ಹಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಹಲವು ತಿಂಗಳಿಂದ ಶಿಲ್ಪಾ ಮತ್ತು ದೇವರಾಜ್ ಹೀಗೆ ಆಪ್‌ನಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಆದರೆ ತನ್ನ ಜೊತೆ ಆಪ್‌ನಲ್ಲಿ ಹಾಡು ಹಾಡುತ್ತಿದ್ದ ದೇವರಾಜ್ ಹಾಡು ಹಾಡಲು ಸ್ಪಂದಿಸಲಿಲ್ಲವೆಂದು ಶಿಲ್ಪಾ ಇಂದು ತನ್ನ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಶುಕ್ರವಾರ ತಡರಾತ್ರಿ ಶಿಲ್ಪಾ, ಯುವಕನಿಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಕರೆ ಮಾಡಿದ್ದಾಗ ಆತ ಕರೆ ಸ್ವೀಕರಿಸಿಲ್ಲ. ಹೀಗೆ ಇಬ್ಬರ ನಡುವೆ ಚಾಟಿಂಗ್ ಮುಂದುವರಿದಿದೆ. ಚಾಟಿಂಗ್ ಮಾಡುತ್ತಿದ್ದಾಗಲೇ ಶಿಲ್ಪಾ ಸಾಯುವುದಾಗಿ ಹೇಳಿ ಯುವಕನಿಗೆ ನೇಣಿನ ಫೋಟೋವೊಂದನ್ನು ಕಳುಹಿಸಿದ್ದಾಳೆ. ಫೋಟೋ ಕಳುಹಿಸಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap