ನವದೆಹಲಿ:
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ಐವರ ಸದಸ್ಯರ ಪೀಠ ಇಂದು ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಪ್ರಕರಣದ ಅರ್ಜಿಗಳ ವಿಚಾರಣೆ ದಿನಾಂಕ ನಿಗದಿ ಮಾಡಲಿದೆ. ಇದರ ಜೊತೆಗೆ ಪ್ರಕರಣದ ವಿಚಾರಣೆಗೆ ಎಷ್ಟು ಸಮಯ ಮೀಸಲಿಡಬೇಕು ಎಂಬ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ ಸಮೀಪಸುತ್ತಿದೆ. ಈ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬುದು ಕೆಲವರ ಆಶಯ. ಈ ಮೂಲಕ ಚುನಾವಣೆಗೂ ಮೊದಲೇ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಬೇಕು ಎನ್ನುತ್ತಾರೆ ಕೆಲವರು. ಈ ಪ್ರಕರಣ ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ ಮೇಲೆ ಸುಗ್ರೀವಾಜ್ಞೆಯ ಕೂಗು ಹೆಚ್ಚಿದೆ. ಇತ್ತೀಚೆಗೆ ರಂಜನ್ ಅವರು ಪ್ರಕರಣದ ವಿಚಾರಣೆಗೆ ಐವರು ಸದಸ್ಯರ ಪೀಠ ರಚನೆ ಮಾಡಿದ್ದರು.
ಇನ್ನು, ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದರು. “ಸುಪ್ರೀಂಕೋರ್ಟ್ ಆದೇಶ ನೀಡುವವ ವರೆಗೂ ನಾವು ಯಾವುದೇ ನಿರ್ಧಾರಕ್ಕೂ ಬರುವುದಿಲ್ಲ. ಸುಪ್ರೀಂ ತೀರ್ಪಿನಂತೆ ನಾವು ನಡೆಯುತ್ತೇವೆ,” ಎಂದು ಅವರು ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ