ಬಳ್ಳಾರಿ :
ಶಾಸಕ ಶ್ರೀರಾಮುಲು ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಸಿಎಂ ಅಧಿಕಾರ ದುರುಪಯೋಗ ಮಾಡಕೊಂಡಿದ್ದಾರೆ ಎಂದು ಕಂಪ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ ,
ಮಂಡ್ಯ ಜಿಲ್ಲಾಧಿಕಾರಿ ಸಿಎಂ ಮಗನನ್ನ ಬಚಾವ್ ಮಾಡಿದ್ದಾರೆ. ದಾಖಲಾತಿ ಸರಿ ಇಲ್ಲದಿದ್ರೂ ನಿಖಿಲ್ ನಾಮಪತ್ರ ಸಿಂಧು ಮಾಡಿದ್ದಾರೆ. ಮಂಡ್ಯ ಡಿಸಿ ಮಾನಿಪ್ಲೇಟ್ ಮಾಡಿದ್ದಾರೆ. ನಾಮಪತ್ರ ಸಲ್ಲಿಸುವ ವಿಡಿಯೋ ತೋರ್ಸಿ ಅಂದ್ರೆ ಪೋಟೋಗ್ರಫರ್ ಮದ್ವೆಗೆ ಹೋಗಿದ್ದಾರೆ ಅಂತಾ ಡಿಸಿ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಮಂಡ್ಯ ಡಿಸಿ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು.
ನಿಖಿಲ್ ನಾಮಪತ್ರ ರಿಜೆಕ್ಟ್ ಮಾಡಲು ಒತ್ತಾಯಿಸಿದ ರಾಮುಲು. ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ಸಲ್ಲಿಸುವಾಗ ಕೇಬಲ್, ಕರೆಂಟ್ ಕಟ್ ಮಾಡಿಸಿದ್ರು. ನಿಖಿಲ್ ನಾಮ ಪತ್ರ ಸಲ್ಲಿಸುವಾಗ ಎಸ್ಪಿ ಮೂಲಕ ಸೂಚನೆ ಕೊಡಿಸಿ, ಜನರೇಟರ್ ವ್ಯವಸ್ಥೆಯನ್ನೂ ಮಾಡಿದ್ರು. ಕಾಂಗ್ರೆಸ್ ರಾಜ್ಯದಲ್ಲಿ ನೆಲಕ್ಕಚ್ಚುತ್ತಿದೆ.
ಸಿದ್ದರಾಮಯ್ಯ ಎಲ್ಲೂ ಕಾಣ್ತಾ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಫ್ಲೆಕ್ಸ್ ನಲ್ಲಿ ಕಾಣಿಸ್ತಿಲ್ಲ. ಅವರನ್ನ ಯಾರಾದ್ರೂ ಸ್ವಲ್ಪ ಕಾಣಿಸಿ ಉಗ್ರಪ್ಪ ಬಳ್ಳಾರಿಯಲ್ಲಿ ಏಕಾಂಗಿಯಾಗಿದ್ದಾರೆ. ಬಳ್ಳಾರಿಯ ಹಿರಿಯ ಕಾಂಗ್ರೆಸ್ ನಾಯಕರು ಕಲ್ಬುರ್ಗಿಗೆ ಹೋಗುತ್ತಿದ್ದಾರೆ… ಹೀಗಾಗಿ ಉಗ್ರಪ್ಪ ಒಂಟಿಯಾಗಿದ್ದಾರೆ…
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ