ಬೆಂಗಳೂರು:
ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಮಂತ್ರಿಯಾಗಿದ್ದೇ ಸಾಕು ನನಗೆ, ಇದರಲ್ಲೇ ಒಳ್ಳೆಯ ಕೆಲಸ ಮಾಡುತ್ತೇನೆ ಅಂತಾ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿರೋ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಹೆಚ್ಡಿ ರೇವಣ್ಣ, ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಅಂತಹ ಯೋಗ ಬಂದಾಗ ಅದನ್ನು ಯಾರೂ ತಡೆಯೋಕಾಗಲ್ಲ ಎಂದರು. ನನ್ನದು ಸ್ವಾತಿ ನಕ್ಷತ್ರ. ನನಗೆ ಮಾಟ ಮಂತ್ರ ಮಾಡಲು ಸಾಧ್ಯವಿಲ್ಲ. ಮಾಡಿದರೆ ಅವರಿಗೇ ಅದು ತಿರುಗು ಬಾಣವಾಗುತ್ತದೆ ಎಂದು ಹೇಳಿದ್ರು.
ಇದೇ ವೇಳೆ ಹಾಸನ ಜಿಲ್ಲಾಧಿಕಾರಿ ಜೊತೆ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರ ಜತೆಯೂ ಡಿಶುಂ, ಡಿಶುಂ ಮಾಡಬೇಕಾದ ಅಗತ್ಯವಿಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೆ. ಬರ ಪರಿಹಾರಕ್ಕೆ 10 ಕೋಟಿ, ಹಾಗೂ 5 ಕೋಟಿ ಬಂದಿದ್ದರ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ ಬಿಡುಗಡೆ ಮಾಡಿರಲಿಲ್ಲ. ಜಿಲ್ಲಾಡಳಿತದಲ್ಲಿ ನಾನು ತಲೆ ಹಾಕಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ