ಬಾಗಲಕೋಟೆ:
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ದ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿದ್ದು ಎರಡು ಬಾರ್‌ಗಳ ಲೈಸನ್ಸ್ ಅಮಾನತು ಮಾಡಿ ಶನಿವಾರ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.ಲಾಕ್‌ಡೌನ್ ನಡುವೆ ಅಕ್ರಮ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ಬಾಗಲಕೋಟೆ ನಗರದ ಮೂನ್‌ಲೈಟ್ ಬಾರ್, ಹಾಗೂ ಡ್ರೈವಿನ್ ಬಾರ್ ಅಂಗಡಿಗಳನ್ನು ಅಮಾನತು ಮಾಡಿ ಅಬಕಾರಿ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ಮಾರಾಟ ಸ್ಥಗಿತದ ಆದೇಶವಿದ್ದರೂ ಕದ್ದುಮುಚ್ಚಿ ಮೂನ್‌ಲೈಟ್ ಬಾರ್‌ನಲ್ಲಿ 35 ಬಾಕ್ಸ್, ಡ್ರೈವಿನ್ ಬಾರ್‌ನಲ್ಲಿ 25 ಬಾಕ್ಸ್ ಮದ್ಯದ ಬಾಟಲಿಗಳ ವ್ಯತ್ಯಾಸ ಸ್ಟಾಕ್ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ