ಬಳ್ಳಾರಿ:
ಬಳ್ಳಾರಿ ಜಿಲ್ಲೆಯ ಹಲವಡೆ ನಿನ್ನೆ ಸಂಜೆ ಮತ್ತು ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಸಿಡಿಲು ಬಡಿದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಬಳ್ಳಾರಿಯ ಗೌತಮನಗರದಲ್ಲಿರುವ ಬಿಸಿಎಂ ಹಾಸ್ಟಲ್‍ನ 21 ವರ್ಷದ ವಿದ್ಯಾರ್ಥಿ ವೆಂಕಟೇಶ್ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈತ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಗೋಸುಬಾಳು ಗ್ರಾಮದವ ಯುವಕ ಬಳ್ಳಾರಿಯ ಎಸ್‍ಜಿಟಿ ಕಾಲೇಜಿನ ವಾಣಿಜ್ಯ ಪದವಿಯ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿ ನಿಲಯದ ಸಮೀಪ ಬರುತ್ತಿದ್ದಾಗ ಸಿಡಿಲು ಬಡಿದಿದೆ. ಇನ್ನು ಬಿರುಗಾಲಿಗೆ ಅನೇಕ ಗುಡಿಲುಗಳ ಮೇಲ್ಚಾವಣೆ ಹಾರಿದೆ, ಅನೇಕ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ