ಬೆಂಗಳೂರು :
ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಸರಿ ದುಪ್ಪಟ್ಟ ಧರಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸದ್ಯ ಚಪಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ದೀಪಿಕಾ ಪಡುಕೋಣೆ ಸಿನಿಮಾವನ್ನು ಅರ್ಧದಲ್ಲೇ ಕೈ ಬಿಟ್ಟು ಮೋದಿ ಪರ ಪ್ರಚಾರದಲ್ಲಿ ತೊಡಗಿಕೊಂಡ್ರಾ ಎಂದು ಅಚ್ಚರಿಪಡಬೇಡಿ. ಈ ಸುದ್ದಿಯ ಅಸಲಿಯತ್ತೇ ಬೇರೆ.
2018 ನವೆಂಬರ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ-ರಣವೀರ್ ಮದುವೆಯ ನಂತರ ಆಶೀರ್ವಾದ ಪಡೆಯಲು ಮುಂಬೈನ ಗಣೇಶ ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕೇಸರಿ ದುಪ್ಪಟ್ಟ ಹಾಕಿಕೊಂಡಿದ್ದರು. ಇದನ್ನು ಎಡಿಟ್ ಮಾಡಿ ಕೇಸರಿ ದುಪ್ಪಟ್ಟದ ಮೇಲೆ ವೋಟ್ ಫಾರ್ ಬಿಜೆಪಿ ಎಂದು ಬರೆಯಲಾಗಿದೆ.
ಈ ಫೋಟೋ ಅಪ್ ಲೋಡ್ ಮಾಡಿದ ಕೂಡಲೇ ಲಕ್ಷಗಟ್ಟಲೇ ಶೇರ್ ಆಗಿದೆ. ಫಾಲೋವರ್ಸ್ ಕೂಡಾ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ