7 IMA ಸಂಸ್ಥೆಯ ನಿರ್ದೇಶಕರು ಪೊಲೀಸ್ ವಶ!!!

ಬೆಂಗಳೂರು : 

    ಐಎಂಎ ಕಂಪೆನಿಯಲ್ಲಿ ಹಣ ಹೂಡಿ ಮೋಸ ಹೋದವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಜನ ಹಣ ಕಳೆದುಕೊಂಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಪೊಲೀಸರು ಕಂಪೆನಿಯ 7 ಜನ ನಿರ್ದೇಶಕರನ್ನು ಬಂಧಿಸಿದ್ದಾರೆ ಆಗಾಗಿ ದೊಡ್ಡ ತಿರುವು ಸಿಕ್ಕಂತಾಗಿದೆ.

       ಈ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ದಳಕ್ಕೆ ನೀಡಿದ್ದು, ಡಿಐಜಿ ಬಿ.ಆರ್.ರವಿಕಾಂತೇಗೌಡ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಂಪೆನಿಗೆ ಸಂಬಂಧಿಸಿದ 7 ಜನ ನಿರ್ದೇಶಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

      ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದ ನಾನಾ ಮೂಲೆಯಿಂದ ಈ ಕಂಪೆನಿಯ ಮೇಲೆ ಜನ ಹಣ ಹೂಡಿದ್ದಾರೆ. ಇದಲ್ಲದೆ ನೆರೆಯ ರಾಜ್ಯಗಳು ದೇಶ ವಿದೇಶದಿಂದಲೂ ಇಲ್ಲಿಗೆ ಹಣ ಹರಿದುಬಂದಿದೆ. ಸಾವಿರಾರು ಕೋಟಿ ಹಣ ಹೂಡಿಕೆಯಾಗುತ್ತಿದ್ದಂತೆ ಆ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿದ್ದ ಮಾಲೀಕ ಮನ್ಸೂರ್ ಖಾನ್​ ಕಳೆದ ವಾರವೇ ದೇಶದಿಂದ ಪರಾರಿಯಾಗಿದ್ದಾನೆ. ಆತ ದುಬೈಗೆ ಹೋಗಿರುವ ಕುರಿತು ಅನುಮಾನವಿದ್ದು ಈ ಕುರಿತು ಸರ್ಕಾರ ತನಿಖೆ ನಡೆಸುತ್ತಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap