ಬೆಂಗಳೂರು:
ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಇನ್ಫೋಸಿಸ್ ಫೌಂಡೇಶನ್ ಧನ ಸಹಾಯ ನೀಡಲು ಮುಂದಾಗಿದೆ. ತಮ್ಮ ಸಂಸ್ಥೆಯ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಸಹಾಯಧನ ನೀಡುವುದಾಗಿ ಮುಖ್ಯಸ್ಥೆ ಸುಧಾಮೂರ್ತಿ ಅವರು ಹೇಳಿದ್ದಾರೆ.
‘ದೇಶಕ್ಕಾಗಿ ಯೋಧರು ಬಲಿಯಾಗಿದ್ದಾರೆ. ಪತ್ರಿಕೆಯಲ್ಲಿ ಓದಿದ ದಿನವೇ ಹಣ ಕೊಡಬೇಕೆಂದುಕೊಂಡೆ. ಹಣ ಮುಖ್ಯವಲ್ಲ, ಯೋಧರ ಜೀವ ಹೋಗಿದೆ. ಅದಕ್ಕೆ ನೋವಿದೆ. ನಮ್ಮ ಸಂಸ್ಥೆಯ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ನಿರ್ಧರಿಸಿದ್ದೇವೆ’ ಎಂದು ಹೇಳಿದರು.
‘ಮಂಡ್ಯದ ವೀರ ಯೋಧ ಗುರು ಹುಟ್ಟೂರಿಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ಗುರು ಪತ್ನಿ ಕಲಾವತಿ ಮನೆಗೆ ಮಾರ್ಚ್ 15 ರ ನಂತರ ತೆರಳುತ್ತೇನೆ. ರಾಷ್ಟ್ರಕ್ಕಾಗಿ ಬಲಿದಾನವಾದವರ ಹಿಂದೆ ನಾವಿದ್ದೇವೆ. ನನಗೆ ದುಡ್ಡು ಕೊಟ್ಟೆ ಎನ್ನುವ ಪ್ರಚಾರ ಬೇಕಿಲ್ಲ. ಈ ಪ್ರೇರಣೆಯಿಂದ ಬೇರೆಯವರು ಸಹಾಯ ಹಸ್ತ ನೀಡುತ್ತಾರೆ. ಹೀಗಾಗಿ ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೀಡುತ್ತಿದ್ದೇವೆ’ ಎಂದರು.