ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

   ಸಮಾರಂಭದ ಅತಿಥಿಗಳಾಗಿ ನಟ ಅನಂತ್​​​​​​​​​​​​​​​​​​​​​​​​​​​ನಾಗ್ ಹಾಗೂ ಬಾಲಿವುಡ್ ನಿರ್ಮಾಪಕ /ನಿರ್ದೇಶಕ ರಾಹುಲ್ ರವೈಲ್ ಆಗಮಿಸಲಿದ್ದಾರೆ. ಇದೇ ತಿಂಗಳ 28ವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಸುಮಾರು 60 ರಾಷ್ಟ್ರಗಳ 125 ಚಲನಚಿತ್ರಗಳು ಪ್ರದರ್ಶನವಾಗಲಿವೆ ಎಂದು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಪ್ರಕೃತಿ ವಿಕೋಪ ಕೇಂದ್ರೀ‌ಕರಿಸಿದ ಸಾಕ್ಷ್ಯಚಿತ್ರಗಳು ಪ್ರದರ್ಶನ‌ ಕಾಣಲಿವೆ.
   ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾದ ರೆಬಲ್​ ಸ್ಟಾರ್ ಅಂಬರೀಶ್ ನಟನೆಯ ನಾಗರಹಾವು, ಏಳು ಸುತ್ತಿನ ಕೋಟೆ, ಅಂತ, ಪಡುವಾರಳ್ಳಿ ಪಾಂಡವರು, ಶುಭಮಂಗಳ , ರಂಗನಾಯಕಿ ಚಿತ್ರಗಳು, ಲೋಕನಾಥ್ ಎಂ.ಎನ್. ವ್ಯಾಸರಾವ್ ಹಾಗೂ ಮೃಣಾಲ್ ಸೇನ್ ಅಭಿನಯದ  ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ. ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಕುರಿತ ಕಿರುಚಿತ್ರ ಕೂಡಾ ಪ್ರದರ್ಶನವಾಗಲಿದೆ.
   ಬೆಂಗಳೂರಿನ ರಾಜಾಜಿನಗರದಲ್ಲಿನ ಓರಾಯನ್ ಮಾಲ್​ನ 11 ಸ್ಕ್ರೀನ್​ಗಳಲ್ಲಿ ಹಾಗೂ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಲನಚಿತ್ರಗಳು  ಪ್ರದರ್ಶನವಾಗಲಿವೆ. ಚಲನಚಿತ್ರೋತ್ಸವದ  ದರ ಕಳೆದ ಬಾರಿಗಿಂತ ಈ ಬಾರಿ ಅಗ್ಗವಾಗಿದೆ. ಸಾರ್ವಜನಿಕರಿಗೆ 8 ದಿನಗಳಿಗೆ ಪ್ರತಿ ಟಿಕೆಟ್ ದರ 800 ರೂಪಾಯಿ ನಿಗದಿಯಾಗಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಹಾಗೂ ಚಿತ್ರೋದ್ಯಮದ ಸದಸ್ಯರಿಗೆ 400 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. 
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap