ಬೆಂಗಳೂರು:
ಲಾಕ್ಡೌನ್ ಆದೇಶದ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಅಗತ್ಯ ಸೇವಾ ಕ್ಷೇತ್ರದ ಸಿಬ್ಬಂದಿ ಓಡಾಡಲು ಬಿಎಂಟಿಸಿ ಬಸ್ ಸೇವೆ ಒದಗಿಸಲಾಗಿದೆ. ಇಂದಿನಿಂದ 180 ಬಿಎಂಟಿಸಿ ಬಸ್ಗಳನ್ನು ಬಿಡಲು ತೀರ್ಮಾನಿಸಲಾಗಿದೆ.
ನಗರದಲ್ಲಿ ಬಿಎಂಟಿಸಿ ಬಸ್ಗಳ ಓಡಾಡಿದರೂ ಸಹ ಸಾರ್ವಜನಿಕರು ಬಸ್ ಹತ್ತುವಂತಿಲ್ಲ. ಅಗತ್ಯ ಸೇವೆಯಡಿ ಕಾರ್ಯ ನಿರ್ವಹಣೆ ಮಾಡುತ್ತಿರುವವರಿಗಷ್ಟೇ ಬಸ್‌ನಲ್ಲಿ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹಾಗೆಯೇ ಬೆಂಗಳೂರು ಸಿಟಿ ಪೊಲೀಸ್ ನೀಡಿದ ಪಾಸ್ ಇದ್ದರಷ್ಟೇ ಓಡಾಡಲು ಅನುಮತಿ ಕೊಡಲಾಗಿದೆ.
ಅಗತ್ಯ ಸೇವೆ ಕ್ಷೇತ್ರದ ಸಿಬ್ಬಂದಿ-ಕರ್ಫ್ಯೂ ಪಾಸ್ ಎಂದು ನಮೂದಾಗಿದ್ದರೆ ಮಾತ್ರ ಬಿಎಂಟಿಸಿ ಬಸ್ ಹತ್ತಬಹುದಾಗಿದೆ. ಪೊಲೀಸ್ ಇಲಾಖೆ ಕೊಟ್ಟ ಪಾಸ್ ಜೊತೆಗೆ ತಮ್ಮ ಕಚೇರಿಯ ಪಾಸ್ ತೋರಿಸುವುದು ಕಡ್ಡಾಯ. ಬೆಂಗಳೂರು ಸಿಟಿ ಪೊಲೀಸರು ಕೊಟ್ಟ ಪಾಸ್ ಇಲ್ಲದಿದ್ದರೆ ಬಿಎಂಟಿಸಿ ಬಸ್ ಹತ್ತುವಂತಿಲ್ಲ. ಬಿಎಂಟಿಸಿ ಬಸ್ಸಿನಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಮ ಮನವಿ ಮಾಡಿದೆ. ಒಂದು ಬಸ್ಗೆ ಕೇವಲ 20 ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಯಾರಿಗಿದೆ ಅವಕಾಶ ಬೆಸ್ಕಾಂ ಸಿಬ್ಬಂದಿ- ಒಳಚರಂಡಿ ಮಂಡಳಿ, ಬಿಬಿಎಂಪಿ ಸಿಬ್ಬಂದಿ ,ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯರು( ಖಾಸಗಿ, ಸರ್ಕಾರಿ) ,ಔಷಧಾಲಯದ ಸಿಬ್ಬಂದಿ ,ಭದ್ರತಾ ಸಿಬ್ಬಂದಿ ,ರಕ್ತದಾನಿಗಳು , ಬ್ಯಾಂಕ್ ಸಿಬ್ಬಂದಿ , ಪತ್ರಕರ್ತರು , ಬಿಎಂಟಿಸಿ ಇವರಲ್ಲದೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ಅಂಗಡಿ ಕಾರ್ಮಿಕರು, ಡೆಲಿವರಿ ಹುಡುಗರು, ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿಯನ್ನು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ