IMA ಮನ್ಸೂರ್ ವಂಚನೆಗೆ ; 8 ಲಕ್ಷ ಕಳೆದುಕೊಂಡ ವ್ಯಕ್ತಿಗೆ ಹೃದಯಾಘಾತ

ಬೆಂಗಳೂರು:

     ಐಎಂಎಯಲ್ಲಿ ಹಣ ಹೂಡಿದ್ದ ಅಫ್ಜಲ್ ಪಾಷಾ ವಂಚನೆಗೊಳಗಾದ ಆಘಾತದಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಹಳೇಗುಡ್ಡದಹಳ್ಳಿ ನಿವಾಸಿಯಾದ ಪಾಷಾ, ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಅಪ್ಜಲ್ ಪಾಷಾ ಫುಟ್ ಬಾತ್ ಮೇಲೆ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ಬಂದ ಹಣದಲ್ಲಿ ಕುಟುಂಬ ಸಾಗಿಸುತ್ತಾ ಇದ್ದರು. ನಾಲ್ಕು ಹೆಣ್ಣು ಮಕ್ಕಳ  ಆದರಲ್ಲಿ  ಇಬ್ಬರಿಗೆ ಮದುವೆ ಮಾಡಿದ್ದಾರೆ. ಮೂರನೇ ಮಗಳ ಮದುವೆಗೆ ಎಂದು 2017ರಲ್ಲಿ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು.

   ಅಪ್ಜಲ್ ಪಾಷಾ 2 ಲಕ್ಷ ತನ್ನ ಇಬ್ಬರು ಹೆಣ್ಣು ಮಕ್ಕಳ ಕಡೆಯಿಂದ ತಲಾ ಮೂರು ಲಕ್ಷ ಒಟ್ಟು ಎಂಟು ಲಕ್ಷ ಹಣ ಹೂಡಿಕೆ ಮಾಡಿದ್ದರು. ಆಗಸ್ಟ್ 4 ರಂದು ಮೂರನೇ ಮಗಳ ಮದುವೆ ಐಎಂಎ ಕಂಪನಿಗೆ ಕಟ್ಟಿದ್ದ ಹಣ ಆಪ್ಲೇ ಮಾಡಿದ್ದರು. ಕಂಪನಿ ಮಾರ್ಚ್ 30 2019ಕ್ಕೆ ಹಣ ಮರುಪಾವತಿ ಮಾಡುವುದಾಗಿ ಲೆಟರ್ ಕೊಟ್ಟಿದೆ. ಏಳು ಎಂಟು ತಿಂಗಳಾದರೂ ಹಣ ಬಂದಿರಲಿಲ್ಲ. 

ಆದರೆ  ವಂಚಕ ಮನ್ಸೂರ್ ಖಾನ್ ನ ಅಸಲಿ ಬಣ್ಣ ಬಯಲಾಗುತ್ತಿದ್ದಂತೆ ಅಪ್ಜಲ್ ಪಾಷಾ ಆತಂಕಗೊಂಡಿದ್ದರು. ಇದೇ ಟೆನ್ಷನ್‍ನಲ್ಲಿ ನಿನ್ನೆ ಪೀಣ್ಯಾದ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ, ವಂಚನೆಯ ಬಗ್ಗೆ ಭಾವುಕರಾಗಿ ಮಾತನಾಡುವಾಗ ಹೃದಯಾಘಾತವಾಗಿದೆ. ತಕ್ಷಣವೇ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಆದರೂ ರಾತ್ರಿ 9.30ರ ಸುಮಾರಿಗೆ ಅಫ್ಜಲ್ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link