ಕರ್ತವ್ಯಕ್ಕೆ ಹಾಜರಾದ ವಿಂಗ್ ಕಮಾಂಡರ್ ಅಭಿನಂದನ್

ಶ್ರೀನಗರ: 
     ಅಭಿನಂದನ್ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮತ್ತದೇ ಜಮ್ಮು ಮತ್ತು ಕಾಶ್ಮೀರ ವಿಭಾಗದಲ್ಲೇ ಅಭಿನಂದನ್ ಕರ್ತವ್ಯಕ್ಕೆ ಹಾಜರಾಗಿದ್ದು, ತಮ್ಮ ಸಹೋದ್ಯೋಗಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತಿರುವ ಅಭಿನಂದನ್ ಅವರ ವಿಡಿಯೋ ಬಿಡುಗಡೆ ಆಗಿದೆ. ವಿಡಿಯೋದಲ್ಲಿ ಅಭಿನಂದನ್ ಅವರು ತಮ್ಮೆಲ್ಲ ಸಹೋದ್ಯೋಗಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಸೆಲ್ಫಿ ಬಳಿಕ ಅಭಿನಂದನ್ ಮತ್ತು ಅವರ ಸ್ನೇಹಿತರು ಭಾರತ್ ಮಾತಾ ಕಿ ಜೈ ಎನ್ನುತ್ತಿದ್ದರೆ, ಅಭಿನಂದನ್ ಕೂಡ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರು.

 

ಬಳಿಕ ಸೈನಿಕರನ್ನು ಉದ್ದೇಶಿಸಿ ಮಾತನಾಡಿರುವ ಅಭಿನಂದನ್, ನಾನೀಗ ನಿಮ್ಮೊಂದಿಗೆ ಚಿತ್ರ ತೆಗೆಸಿಕೊಂಡಿದ್ದು, ನಿಮ್ಮ ಕುಟುಂಬಗಳಿಗಾಗಿ, ಅವರ ಹಾರೈಕೆಯಿಂದ ನಾನು ಬೇಗನೆ ಹುಷಾರಾಗಿದ್ದೇನೆ ಎಂದು ಹೇಳಿದ್ದಾರೆ.

 

  ಬಾಲಾಕೋಟ್ ವಾಯುದಾಳಿ ಬಳಿಕ ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ವಿಮಾನವು ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ತಾಂತ್ರಿಕ ಕಾರಣಗಳಿಂದಾಗಿ ಅಭಿನಂದನ್ ಯುದ್ಧ ವಿಮಾನ ಪಾಕಿಸ್ತಾನದಲ್ಲಿ ಧರೆಗುರುಳಿತ್ತು. ಆಗ ಅಭಿನಂದನ್ ಅವರು ಪಾಕಿಸ್ತಾನದ ಸೇನೆ ಕೈಗೆ ಸಿಲುಕಿದ್ದರು. ಅಲ್ಲಿ ಅವರು ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡದೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು. ಎರಡು ದಿನಗಳ ಬಳಿಕ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಇದೀಗ ಅಭಿನಂದನ್ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ