ಭಾರತಕ್ಕೆ ‘5ಜಿ’ ಸೇವೆ ಇಲ್ಲ ಎಂದ ಚೀನಾ ಮಾಧ್ಯಮ… : ಸ್ಪಷ್ಟನೆ ನೀಡಿದ ಹುವಾಯ್

  ‘5ಜಿ’ ಸೇವೆ ಆರಂಭಿಸುವ ಕುರಿತು ಭಾರತ ಸರ್ಕಾರದೊಂದಿಗಿನ ನಮ್ಮ ಮಾತುಕತೆ ಸಕಾರಾತ್ಮಕ ಹಾದಿಯಲ್ಲಿದೆ. ಈ ನಿಟ್ಟಿನಲ್ಲಿ ನಾವು ಸಕಲ ರೀತಿಯಲ್ಲಿ ಸನ್ನದ್ಧರಾಗಿದ್ದೇವೆ.  ದೂರಸಂಪರ್ಕ ಇಲಾಖೆಯಿಂದ (ಡಿಒಟಿ) ಅನುಮೋದನೆ ಪಡೆದ ತಿಂಗಳ ಒಳಗೆ 5ಜಿ ಪರೀಕ್ಷಾರ್ಥ ಸೇವೆಯನ್ನು ಆರಂಭಿಸುತ್ತೇವೆ’ ಎಂದು ಜಯ್ ಚೇನ್ ಹೇಳಿದ್ದಾರೆ.

   ಭಾರತಿ ಏರ್​ಟೆಲ್, ರಿಲಯನ್ಸ್​ ಜಿಯೋ, ಬಿಎಸ್​ಎನ್​ಎಲ್​ ಸೇರಿದಂತೆ ಇತರೆ ಪ್ರಮುಖ ಟೆಲಿಕಾಂ ಆಪರೇಟರ್​ಗಳ ಜತೆಗೂಡಿ ಭಾರತ ಸರ್ಕಾರದೊಡನೆ ಮಾತನಾಡುತ್ತೇವೆ. ಹುವಾಯ್ ಜಾಗತಿಕ 5ಜಿ ಸೇವೆ ನೀಡಿಕೆಯಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಸುರಕ್ಷತೆಗೆ ಅಪಾಯ ಉಂಟುಮಾಡುತ್ತಿದೆ ಎಂಬ ಅಮೆರಿಕದ ಆರೋಪದಲ್ಲಿ ಹುರುಳಿಲ್ಲ. ಇದೊಂದು ರಾಜಕೀಯ ಪ್ರೇರಿತ ಆಪಾದನೆ. ಹುವಾಯ್ ತಪ್ಪು ದಾರಿಯಲ್ಲಿ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಇದುವರೆಗೂ ಯಾವ ರಾಷ್ಟ್ರ ನೀಡಿಲ್ಲ ಎಂದು ಕಿಡಿಕಾರಿದರು.

    ಭಾರತ ಈ ವಿಷಯದಲ್ಲಿ ತನ್ನದೇ ಯಾದ ಸ್ವಂತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಆಶಾಭಾವನೆ ನಮಗಿದೆ. ಕ್ರಿಕೆಟ್ ಇಲ್ಲದೆ ಭಾರತ ಇರಲು ಹೇಗೆ ಸಾಧ್ಯವಿಲ್ಲವೋ 5ಜಿ ಇಲ್ಲದೆ ಹುವಾಯ್ ಇರುವ ಹಾಗಿಲ್ಲ ಎಂದರು.
                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link