ಪ್ರಧಾನಿಯಿಂದ ನೀತಿ ಸಂಹಿತೆ ಉಲ್ಲಂಘನೆ : ಸೀತಾರಾಮ್ ಯೆಚೂರಿ

ನವದೆಹಲಿ:

   ಭೂಕಕ್ಷೆಯ ಮೇಲಿರುವ ಸೆಟಿಲೈಟ್​ಗಳನ್ನ ನಾಶ ಮಾಡಬಲ್ಲ ಮಿಷನ್ ಶಕ್ತಿ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

   ಮಿಷನ್ ಶಕ್ತಿಯಂಥ ಯೋಜನೆಯನ್ನು ಡಿಆರ್​ಡಿಓದಂಥ ಸಂಬಂಧಿತ ವೈಜ್ಞಾನಿಕ ಸಂಸ್ಥೆಯವರು ಘೋಷಣೆ ಮಾಡುವ ಬದಲು ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಈ ಕೆಲಸ ಮಾಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.

   ದೇಶವನ್ನುದ್ದೇಶಿಸಿ ಮಾತನಾಡುವಾಗ ಈ ವಿಚಾರವನ್ನು ತಿಳಿಸಲು ಪ್ರಧಾನಿ ಅವರು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದಿದ್ದರೆ? ಪೂರ್ವಾನುಮತಿ ಇದ್ದದ್ದೇ ಆದಲ್ಲಿ ಆಯೋಗವು ಯಾವ ಆಧಾರದ ಮೇಲೆ ಮೋದಿ ಅವರ ಈ ಭಾಷಣಕ್ಕೆ ಅನುಮತಿ ಕೊಡಲಾಗಿದೆ? ಎಂದು ಯೆಚೂರಿ ಅವರು ಪ್ರಶ್ನಿಸಿದ್ದಾರೆ.

   
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap