ನವದೆಹಲಿ:
ಎಂಟು ಜಲಾಂತರ್ಗಾಮಿ ವಿರೋಧಿ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ಸ್ ನೌಕೆಯನ್ನ ಭಾರತೀಯ ನೌಕಾಪಡೆಗಾಗಿ ನಿರ್ಮಿಸುವ ಒಪ್ಪಂದಕ್ಕೆ ಭಾರತೀಯ ರಕ್ಷಣಾ ಸಚಿವಾಲಯ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಲಿಮಿಟೆಡ್ ಜೊತೆ ಸಹಿ ಹಾಕಿದೆ.
ಒಟ್ಟು 6,311.32 ಕೋಟಿ ರೂಪಾಯಿಯ ಒಪ್ಪಂದಕ್ಕೆ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ನಿರ್ವಾಹಕ ರವಿಕಾಂತ್ ಮತ್ತು ಹಣಕಾಸು ನಿರ್ದೇಶಕ ಎಸ್.ಎಸ್. ಡೋಗ್ರಾ ಸಹಿ ಹಾಕಿದ್ದಾರೆ. ಇನ್ನು ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ 42 ತಿಂಗಳುಗಳ ಒಳಗೆ ಮೊದಲ ಹಡಗನ್ನ ಸೇನೆಗೆ ಒಪ್ಪಿಸಲು ಒಪ್ಪಂದವಾಗಿದೆ. ಇನ್ನು ಈ ಜಲಂತರ್ಗಾಮಿ ನೌಕೆಗಳು 750 ಟನ್ ತೂಕವನ್ನ ಹೊತ್ತೊಯ್ಯುವ ಸಾಮರ್ಥ್ಯ ಹಾಗೂ 25 ನಾಟ್ ವೇಗದಲ್ಲಿ ಚಲಿಸುವ ಕ್ಷಮತೆಯನ್ನ ಹೊಂದಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ