ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ : ದೀಪಕ್​​ ಮಿತ್ತಲ್

ನವದೆಹಲಿ:

      ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ 44 ಸಿಆರ್‌ಪಿಎಫ್ ಯೋಧರು ಬಲಿಯಾದ ಬಳಿಕ ಮತ್ತೊಮ್ಮೆ ಭಾರತ್​​ ಮತ್ತು ಪಾಕ್​​ ನಡುವೇ ಉದ್ವಿಗ್ನತೆ ಉಂಟಾಗುವ ಪರಿಸ್ಥಿತಿ  ಎದುರಾಗಿತ್ತು. ಪ್ರಕರಣವೊಂದರಲ್ಲಿ ಭಾರತ ಸೇನಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್​​ಗೆ ಪಾಕ್​​ ವಿಧಿಸಿದ್ದ ಗಲ್ಲುಶಿಕ್ಷೆ ಕುರಿತಾದ ಪ್ರಕರಣದ ವಿಚಾರಣೆ ಇಂದು ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ನಡೆಯಿತು. ಈ ವೇಳೆ ಕೋರ್ಟ್​​ನಲ್ಲಿಯೇ ಭಾರತೀಯರೊಬ್ಬರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಈ ಅಪರೂಪದ ಘಟನೆಗೆ ನ್ಯಾಯಾಲಯ ಸಾಕ್ಷಿಯಾಗಿದೆ ಎನ್ನಬಹದು.

   ಭಾರತೀಯ ವಿದೇಶ ಕಾರ್ಯದರ್ಶಿ ದೀಪಕ್ ಮಿತ್ತಲ್ ಅವರು ವಿಚಾರಣೆಗೆ ಮುನ್ನ ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್‌ರನ್ನು ನ್ಯಾಯಾಲಯದಲ್ಲಿ ಭೇಟಿ ಮಾಡಿದರು. ವಿಚಾರಣೆ ಆರಂಭಗೊಳ್ಳುವ ಮೊದಲೇ ಭೇಟಿಯಾದ ಘಟನೆ ಎಲ್ಲರ ಗಮನಕ್ಕೂ ಬಂದಿತ್ತು. ಕುಶಲೋಪರಿ ನಡೆಸುವ ಸಂದರ್ಭದಲ್ಲಿ ಕೈ ಕುಲುಕುವುದಕ್ಕಾಗಿ ಅನ್ವರ್ ಮನ್ಸೂರ್ ಖಾನ್ ಕೈ ಚಾಚಿದಾಗ ದೀಪಕ್ ಮಿತ್ತಲ್ ಅದನ್ನು ತಿರಸ್ಕರಿಸುತ್ತಾರೆ. ಬಳಿಕ ಕೈಜೋಡಿಸಿ ‘ನಮಸ್ಕಾರ’ ಎನ್ನುತ್ತಾರೆ. ಈ ಮೂಲಕ ಪಾಕ್​​ ಮೂಲದ ಮನ್ಸೂರ್ ಖಾನ್ ಅವರಿಗೆ ಮುಕಜುಗರಕ್ಕೀಡು ಮಾಡುತ್ತಾರೆ ಎನ್ನಲಾಗಿದೆ.

   ಇಂದು ಅಂತರಾಷ್ಟ್ರೀಯ ಕೋರ್ಟ್​​ನಲ್ಲಿ ಕುಲಭೂಷಣ್ ಜಾಧವ್‌ಗೆ ಪಾಕ್​​ ಸೇನಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಬಗೆಗಿನ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಪಾಕ್​​ ಅಂತರಾಷ್ಟ್ರೀಯ ಕಾನೂನು ಮತ್ತು ಸಂಪ್ರದಾಯದ ಉಲ್ಲಂಘನೆ ಮಾಡಿದೆ. ಭಾರತದ ನೌಕಾ ಪಡೆ ಮಾಜಿ ಅಧಿಕಾರಿ ಜಾಧವ್ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಇದು ಭಾರತದ ವಿರುದ್ಧ ಪಾಕ್​​ ರೂಪಿಸುತ್ತಿರವ ಷಡ್ಯಂತ್ರ ಎಂದು ಹರೀಶ್​​ ಸಾಳ್ವೆ ಅಭಿಪ್ರಾಯಪಟ್ಟರು.

   ಇನ್ನು ಜಾಧವ್​​​ಗೆ ಮರಣದಂಡನೆ ವಿಧಿಸಿ ಆದೇಶಿಸಿದ್ದ ಪಾಕಿಸ್ತಾನ ಸೇನಾ ನ್ಯಾಯಾಲಯದ ತೀರ್ಪನ್ನು ಭಾರತವು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ಮೂಲಕ 2017 ಮೇ ತಿಂಗಳಲ್ಲಿಯೇ ಪಾಕ್​​ ಜಾಧವ್​​ಗೆ ಹೊರಡಿಸಿದ್ದ ಗಲ್ಲುಶಿಕ್ಷೆಗೆ ತಡೆಯಾಜ್ಞೆ ತಂದಿತು. ಪ್ರಕರಣದಲ್ಲಿ ಪಾಕಿಸ್ತಾನವು ಯಾವುದೇ ಪ್ರಬಲ ಸಾಕ್ಷಿ ಹೊಂದಿಲ್ಲ. ನಮಗೆ ಯಾವ ಪುರಾವೆ ಕೂಡ ನೀಡುತ್ತಿಲ್ಲ. ಚಾರ್ಜ್​​ಶೀಟ್​​ ಸಲ್ಲಿಸಿದ್ದ ಪ್ರತಿಯನ್ನು ಕೂಡ ನೀಡುತ್ತಿಲ್ಲ ಎಂದು ಸಾಳ್ವೆ ಚಾಟಿ ಬೀಸಿದ್ದರು.

  ಈ ಮಧ್ಯೆ ಒಂದು ಅಪರೂಪದ ಘಟನೆ ನಡೆದಿದ್ದು, ಕೈ ಕಲುಕಿಸಲು ಮುಂದಾದ  ಮನ್ಸೂರ್ ಖಾನ್​ಗೆ ದೀಪಕ್​​ ಮಿತ್ತಲ್​​ ಕೈ ಚಾಚದೇ ನಮಸ್ಕರಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ