ದಾವೂದ್​ ಇಬ್ರಾಹಿಂಗೆ ಶಾಕ್ ನೀಡಿದ ನೇಪಾಳ ಪೊಲೀಸ್!!

ನವದೆಹಲಿ: 

    ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಭೂಗತ ದೊರೆ ದಾವೂದ್​ ಇಬ್ರಾಹಿಂಗೆ ನೇಪಾಳ ಪೊಲೀಸರು ಶಾಕ್​ ಕೊಟ್ಟಿದ್ದಾರೆ. ಭಾರತದ ಫೇಕ್​ ನೋಟ್​ಗಳನ್ನ ಸಾಗಿಸುತ್ತಿದ್ದ ದಾವೂದ್​ ಇಬ್ರಾಹಿಂನ ಸಹಾಯಕ, ಆಪ್ತ, ಯುನುಸ್​ ಮಿಯಾ ಅನ್ಸಾರಿ ಸೇರಿ ಐವರು ಆರೋಪಿಗಳನ್ನ ನೇಪಾಳ ಪೊಲೀಸರು ತ್ರಿಭುವನ್​ ಇಂಟರ್​ ನ್ಯಾಷನಲ್​ ಏರ್​ಪೋರ್ಟ್​ನಲ್ಲಿ ಅರೆಸ್ಟ್​ ಮಾಡಿದ್ದಾರೆ.

    ಯುನುಸ್​ ಮಿಯಾ ಅನ್ಸಾರಿ ಹಾಗೂ ಪಾಕಿಸ್ತಾನದ ಮೂವರು, ನೇಪಾಳದ ಇಬ್ಬರು ಆರೋಪಿಗಳು ಭಾರತದ 2000 ರೂಪಾಯಿ ಮುಖಬೆಲೆ ನಕಲಿ​ ನೋಟುಗಳನ್ನ ಕತಾರ್​ದಿಂದ ನೇಪಾಳಕ್ಕೆ ತಂದಿದ್ದರು. ಆದ್ರೆ, ಆರೋಪಿಗಳ ಬಳಿ ಇದ್ದ ಪಾಸ್​ಪೋರ್ಟ್​ ಪಾಕಿಸ್ತಾನದಿಂದ ಬಂದವರೆಂದು ತೋರಿಸುತ್ತಿತ್ತು.

   ಇದರ ಆಧಾರದ ಮೇಲೆ ವಿಚಾರಣೆ ನಡೆಸಿದ ಪೊಲೀಸರು ಯುನುಸ್​ ಅನ್ಸಾರಿ ಅಕ್ರಮವಾಗಿ ನೇಪಾಳದಲ್ಲಿ ISI ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ ಅನ್ನೋದು ತಿಳಿದು ಬಂದಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ISI ಆದೇಶದ ಮೇರೆಗೆ ಭಾರತದಲ್ಲಿ ಫೇಕ್​ ನೋಟ್​ಗಳನ್ನ ಚಲಾವಣೆ ಮಾಡಲು ಪ್ಲಾನ್​ಮಾಡಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಯುನುಸ್​ ಅನ್ಸಾರಿ ನೇಪಾಳದ ಮಾಜಿ ಸಚಿವ ಸಲೀಮ್​ ಅನ್ಸಾರಿ ಅವರ ಮಗ. ಆದ್ರೆ, ದಾವೂದ್​ ಇಬ್ರಾಹಿಂನ ಡಿ-ಕಂಪನಿ ಜೊತೆ ಸಂಪರ್ಕ ಹೊಂದಿದ್ದ ಮತ್ತು ದಾವೂದ್​ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap