ನವದೆಹಲಿ:
ಈಗ ಎಲ್ಲರು ಎಲೆಕ್ಟ್ರಿಕ್ ವಾಹನದತ್ತ ಮುಖಮಾಡುತ್ತಿದ್ದಾರೆ . ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ರಾಯಲ್ ಎನ್‌ಫೀಲ್ಡ್ ಫೊಟೊನ್ ಹೆಸರಿನಲ್ಲಿ ನೂತನ ಎಲೆಕ್ಟ್ರಿಕ್ ಬೈಕ್ ಸಿದ್ದವಾಗಿದ್ದು. ಕೊರೋನಾ ಹತೋಟಿಯಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ .
ಯುಕೆ ಮೂಲದ ಕ್ಲಾಸಿಕ್ ಕಾರ್ ಕಂಪನಿಯಿಂದ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ಮಾಡಲಾಗಿದ್ದು. 90 ನಿಮಿಷದಲ್ಲಿ ನೂತನ ಫೊಟೊನ್ ಬೈಕ್ ಸಂಪೂರ್ಣ ಚಾರ್ಜ್ ಆಗಲಿದೆ ಸಂಪೂರ್ಣ ಚಾರ್ಜ್‌ಗೆ 130 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ ಮತ್ತು 12kW ಮೊಟರ್ ಬಳಸಲಾಗಿದ್ದು, 16hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಫೊಟೊನ್ ಎಲೆಕ್ಟ್ರಿಕ್ ಬೈಕ್ ಬೆಲೆ 19 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ