1 ಸೆಕೆಂಡ್​ ಆ್ಯಡ್​ಗೆ 2 ಲಕ್ಷ ರೂಪಾಯಿ ದರ ವಿಧಿಸಿದೆ : ಸ್ಟಾರ್ ಇಂಡಿಯಾ

ನವದೆಹಲಿ:

   ವಿಶ್ವಕಪ್ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಪ್ರತಿ ಎಸೆತ ಉಭಯ ತಂಡಗಳಿಗೆ  ಮುಖ್ಯವಾಗಿರುತ್ತದೆ, ಅದೇ ಪಂದ್ಯದ ಪ್ರತಿ ಸೆಕೆಂಡು,​ ಜಾಹಿರಾತು ವಿತರಣಾ ಹಕ್ಕು ಖರೀದಿದಾರರಿಗೆ ಚಿನ್ನದ ಮೊಟ್ಟೆ ಇಡುವ ಸಮಯ! 

    ಎಂಟು ವರ್ಷಕ್ಕೆ 12 ಸಾವಿರ ಕೋಟಿ ರೂ. ನೀಡಿ ಸ್ಯಾಟ್​ಲೈಟ್ ಹಕ್ಕು ಪಡೆದ ಸ್ಟಾರ್ ಇಂಡಿಯಾ, ಈಗ ಪ್ರತಿ ಸೆಕೆಂಡ್​ ಜಾಹೀರಾತಿಗೆ ₹ 1.7 ಲಕ್ಷದಿಂದ ₹ 2 ಲಕ್ಷದವರೆಗೆ ದರ ವಿಧಿಸಿದೆ. ಇದು ಭಾರತ ಮೇಲೆ ನಡೆಯುವ ಪಂದ್ಯಾವಳಿಗೆ ನಿಗದಿಪಡಿಸಿದ ಮಾತ್ರ ಎಂದು ತಿಳಿಸಿದೆ. ಪಂದ್ಯದಲ್ಲಿನ ಓವರ್​ ಮುಕ್ತಾಯದಲ್ಲಿ ಪ್ರಸಾರವಾಗುವ ರನ್​ ಆಫ್ ಶೆಡ್ಯೂಲ್​ನ (ಆರ್​ಒಎಸ್​) 10 ಸೆಕೆಂಡ್​ ಜಾಹೀರಾತಿಗೆ ₹ 17 ಲಕ್ಷದಿಂದ ₹ 20 ಲಕ್ಷದವರೆಗೂ ದರ ಮಾಡಲಾಗಿದೆ . ಭಾರತ ಹೊರತುಪಡಿಸಿ ವಿದೇಶ ಪಂದ್ಯಗಳಿಗೆ ₹ 6 ಲಕ್ಷದಿಂದ ₹ 7 ಲಕ್ಷದವರೆಗೆ ಸ್ಲಾಟ್​ ದರವಿದೆ.

    ಹಾಗೂ ಸೆಮಿ ಫೈನಲ್, ಫೈನಲ್​ ಹಾಗೂ ಕೊನೆಯ ಓವರ್​ಗಳಲ್ಲಿನ ತೀವ್ರ ಕುತೂಹಲ- ಹಣಾಹಣಿಯಿಂದ ಕೂಡಿರುವ ಪಂದ್ಯಗಳಿಗೆ ಜಾಹೀರಾತು ದರ ಮೊತ್ತ ಇನ್ನಷ್ಟು ಅಧಿಕವಾಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap