ಮೋದಿ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ನವದೆಹಲಿ:  ವಾರಣಾಸಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ ತಮ್ಮ ಬಳಿ ಇರುವ ಆಸ್ತಿ ಘೋಷಣೆ ಮಾಡಿದ್ದಾರೆ.
   2014 ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಪ್ರಧಾನಿ ಮೋದಿ ಆಸ್ತಿ 1.6 ಕೋಟಿ ರೂ.ಗಳಾಗಿತ್ತು  ನಾಮಪತ್ರದಲ್ಲಿ ಘೋಷಿಸಿದಂತೆ ಪ್ರಧಾನಿ ಮೋದಿ ಬಳಿ 2.5 ಕೋಟಿ ರೂ. ಆಸ್ತಿಯಿದೆ. ಇದರಲ್ಲಿ ಗಾಂಧಿನಗರದಲ್ಲಿರುವ ನಿವೇಶನ, 1.27 ಕೋಟಿ ರೂ. ಫಿಕ್ಸೆಡ್ ಡೆಪಾಸಿಟ್ ಸೇರಿದೆ.
    ಮತ್ತು , ಗುಜರಾತ್ ವಿವಿಯಿಂದ 1983 ರಲ್ಲಿ ಎಂಎ ಪದವಿ, 1978  ರಲ್ಲಿ ಡೆಲ್ಲಿ ವಿವಿಯಿಂದ ಬಿಎ ಪದವಿ, ಪಡೆದಿರುವುದಾಗಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಇನ್ನು ತಮ್ಮ ಪತ್ನಿಯ ಆದಾಯ ಮತ್ತು ಇತರ ಮಾಹಿತಿ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದು ಬರೆದುಕೊಂಡಿದ್ದಾರೆ.
   
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link