ಕೊರೊನಾಗೆ ಅಂಚೆನೌಕರರು ಮೃತಪಟ್ಟವರಿಗೆ 10 ಲಕ್ಷ ರೂ. ಪರಿಹಾರ

ನವದೆಹಲಿ: 

   ಅಂಚೆ ನೌಕರರು ಕೋವಿಡ್​ಗೆ ಬಲಿಯಾದರೆ 10 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.  ಅಂಚೆ ಇಲಾಖೆ ಜನರಿಗೆ ಅಗತ್ಯವಾದ ಸೇವೆಯನ್ನು ಒದಗಿಸುತ್ತಿದೆ. ಆಹಾರದ ಪೊಟ್ಟಣ, ಪಡಿತರ ಹಾಗೂ ಔಷಧವನ್ನ ಸ್ಥಳೀಯ ಆಡಳಿತ ಹಾಗೂ ಪೊಲೀಸರ ಜೊತೆಗೂಡಿ ವಿತರಣೆ ಮಾಡುತ್ತಿದೆ.

   ಈ ಹಿನ್ನೆಲೆ ಅಂಚೆ ನೌಕರರು ಏನಾದರು ಕೊರೊನಾಗೆ ತುತ್ತಾದರೆ 10 ಲಕ್ಷ ಪರಿಹಾರಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಎಲ್ಲಾ ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್​ ಮತ್ತು ವ್ಯವಸ್ಥಾಪಕರ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿ, ದೇಶಾದ್ಯಂತ ಅಗತ್ಯವಿರುವವರಿಗೆ ಸಹಾಯ ಮಾಡಲು ಸಕ್ರಿಯರಾಗಿ ಎಂದು ಸೂಚನೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap