ಹಾಸನ:
ಈಗಲೂ ಸಿದ್ದರಾಮಯ್ಯನವರೇ ನನ್ನ ನಾಯಕ ಎಂದು ಹೇಳುವುದರ ಮೂಲಕ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎ. ಮಂಜು, ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ.
ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಎ. ಮಂಜು, ಬೆಳೆದು ಬಂದ ದಾರಿಯನ್ನು ಮರೆಯುವವನು ನಾನಲ್ಲ. ಕಾಂಗ್ರೆಸ್ ತೊರೆದು ನಾನು ಬಿಜೆಪಿ ಸೇರ್ಪಡೆಗೊಂಡಿದ್ದರೂ ನನ್ನ ರಾಜಕೀಯ ಗುರು ಹಾಗು ಹಿತೈಷಿ ಸಿದ್ದರಾಮಯ್ಯನವರೇ. ಈಗಲೂ ಸಿದ್ದರಾಮಯ್ಯನವರೇ ನನ್ನ ನಾಯಕ ಎಂದು ಘೋಷಿಸಿದ್ದಾರೆ.
ಸಿದ್ದರಾಮಯ್ಯನವರು ಪಕ್ಷ ತೊರೆಯದಂತೆ ಮನವೊಲಿಸಲು ಯತ್ನಿಸಿದ್ದು ನಿಜ. ಆದರೆ ಹಾಸನ ಜಿಲ್ಲಾ ಕಾರ್ಯಕರ್ತರನ್ನು ಸಂಕಷ್ಟಕ್ಕೆ ಸಿಲುಕಿಸಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ. ಹಾಗೇ ಕೇಂದ್ರದಲ್ಲಿ ಈ ಬಾರಿಯೂ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.