ಕೇರಳ :
ಕೇರಳದಲ್ಲಿ ಸೋಂಕು ಅಂಟಿದ ಐವರು ಒಂದೇ ಕುಟುಂಬದವರಾರಿದ್ದು ಇವರಲ್ಲಿ ಮೂವರು ಇತ್ತೀಚೆಗಷ್ಟೇ ಇಟಲಿಗೆ ಭೇಟಿ ನೀಡಿದ್ದರು.
ಕೊರೋನ ವೈರಸ್ ಪೀಡಿತವಾಗಿರುವ ದೇಶಗಳಲ್ಲಿ ಇಟಲಿ ಕೂಡ ಒಂದಾಗಿದೆ. ಈ ಕುಟುಂಬವರು ಏರ್ಪೋರ್ಟನಲ್ಲಿ ತಮ್ಮ ಪ್ರಯಾಣದ ಇತಿಹಾಸವನ್ನು ಹಂಚಿಕೊಂಡಿರಲಿಲ್ಲ. ಹೀಗಾಗಿ ಅವರನ್ನು ತಪಸಾಣೆ ನಡೆಸಿರಲಿಲ್ಲ. ಇಟಲಿಯಿಂದ ಬಂದಿರುವ ಕುಟುಂಬ ಸದಸ್ಯರು ಆರಂಭದಲ್ಲಿ ಹಾಸ್ಪಿಟಲ್‌ಗೆ ದಾಖಲಾಗಲು ನಿರಾಕರಿಸಿದ್ದಾರೆ. ನಾವು ಮನವೊಲಿಸಿದ್ದೇವೆ” ಎಂದು ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೃಳಿದ್ದಾರೆ.
ವೈರಸ್ ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ಐವರ ಪೈಕಿ ಮಗೂ ಕೂಡ ಸೇರಿದೆ. ಮಗು ಹಾಗೂ ಹೆತ್ತವರು ಇತ್ತೀಚೆಗೆ ಇಟಲಿಗೆ ತೆರೆಳಿದ್ದರು. ಅವರು ಇಟಲಿಯಿಂದ ವಾಪಸಾದ ಬಳಿಕ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಅವರು ಸಂಬಂಧಿಕರಲ್ಲಿ ವೈರಸ್ ಲಕ್ಷಣ ಕಾಣಿಸಿಕೂಂಡ ಬಳಿಕ ಆಸ್ಪತ್ರೆಗೆ ತೆರಳಿದ್ದರು. ಎಂದು ತಿಳಿದುಬಂದಿದೆ . ಸದ್ಯ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ