ಕೊಲಂಬೋ:
ಈಸ್ಟರ್ ಸಂಡೇ ದಿನ ಸರಣಿ ಬಾಂಬ್ ದಾಳಿಗೆ ಒಳಗಾಗಿದ್ದ ಶ್ರೀಲಂಕಾ, ಉಗ್ರರ ದಮನಕ್ಕೆ ಭಾರತದ ನೆರವು ಕೇಳಿದೆ. ಉಗ್ರರಿಗೆ ತಕ್ಕ ಪಾಠ ಕಲಿಸಲು ಬಾಂಬ್ ನಿಷ್ಕ್ರಿಯಗೊಳಿಸುವ ಸಾಮಗ್ರಿ, ಸೈಬರ್ ವಾರ್ಫೇರ್ ಅಸಿಸ್ಟೆನ್ಸ್ ಹಾಗೂ ಕೆಲ ತರಬೇತಿ ಮತ್ತು ಸಾಮಗ್ರಿಗಳ ನೆರವು ನೀಡುವಂತೆ ಭಾರತದ ನೆರವು ಕೇಳಿದ್ದೇವೆ ಅಂತಾ ಶ್ರೀಲಂಕಾ ಸೇನಾ ಮುಖ್ಯಸ್ಥ ಮಹೇಶ್ ಸೇನಾನಾಯಕೆ ಹೇಳಿದ್ದಾರೆ. ನಮಗೆ ಯಾವುದೇ ದೇಶದ ಮಿಲಿಟರಿ ಸಹಕಾರ ಬೇಡ.
ಎಲ್ಟಿಟಿಇ ವಿರುದ್ಧವೇ ನಾವು ಹೋರಾಡಿದ್ದೇವೆ. ಆದ್ರೆ ಮುಂಬರುವ ದಿನಗಳಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ನಮ್ಮ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ನಮಗೆ ಬೇರೆ ದೇಶಗಳಿಂದ ಟೆಕ್ನಿಕಲ್ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ಜೊತೆ ನಮ್ಮ ಸಂಬಂಧ ಸದಾ ಹೀಗೆ ಉತ್ತಮವಾಗಿರುತ್ತೆ ಎಂಬ ವಿಶ್ವಾಸವನ್ನು ಮಹೇಶ್ ಸೇನಾನಾಯಕೆ ವ್ಯಕ್ತಪಡಿಸಿದ್ದಾರೆ.