ಬಿಹಾರ್:
ಕಾಂಗ್ರೆಸ್ 70 ವರ್ಷದಲ್ಲಿ ಅಭಿವೃದ್ಧಿ ಮಾಡಲಾಗದ್ದು ನಾವು ಹೇಗೆ ಐದು ವರ್ಷದಲ್ಲಿ ಮಾಡಲು ಸಾಧ್ಯ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇದೀಗ ಉಲ್ಟಾ ಹೊಡೆದಿದ್ದಾರೆ.
ಮಿಷನ್ 2019 (ಲೋಕಸಭೆ ಚುನಾವಣೆ 2019) ಭರ್ಜರಿ ಸಿದ್ದತೆ ನಡೆಸಿರುವ ಅವರು, ದೇಶದ ಜನತೆಯ ಮತ್ತಷ್ಟು ಸೇವೆ ಮಾಡಲು ಸಮಯಾವಕಾಶದ ಅಗತ್ಯವಿದೆ ಎಂದು ಹೇಳಿದ್ದಾರೆ.
ಬಿಹಾರ್‌ನ ಜಮುಯಿ ಜಿಲ್ಲೆಯಲ್ಲಿ ಆಯೋಜಿಸಲಾದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 70 ವರ್ಷದಲ್ಲಿ ಅಭಿವೃದ್ಧಿ ಮಾಡಲಾಗದ್ದು ನಾವು ಹೇಗೆ ಐದು ವರ್ಷದಲ್ಲಿ ಮಾಡಲು ಸಾಧ್ಯ? ದೇಶದ ಜನತೆಯ ಮತ್ತಷ್ಟು ಸೇವೆ ಮಾಡಲು ಸಮಯಾವಕಾಶದ ಅಗತ್ಯವಿದೆ ಎಂದರು.
ಕಳೆದ 2014ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 70 ವರ್ಷ ನೀಡಿದ್ದೀರಿ. ನಮಗೆ ಕೇವಲ 60 ತಿಂಗಳು ನೀಡಿದಲ್ಲಿ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಆದರೆ, ನೇನ್ನೆ ಪ್ರಧಾನಿ ಮೋದಿ ಮತ್ತಷ್ಟು ಸಮಯ ನೀಡುವಂತೆ ಕೋರಿದ್ದಾರೆ. ಕಳೆದ ಐದು ವರ್ಷಗಳಲ್ಲಿ ತುಂಬಾ ಕೆಲಸ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಸಮಯದ ಅಗತ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಕಾನೂನು ಗಾಳಿಗೆ ತೂರಿ ಸರಕಾರ ರಿವರ್ಸ್ ಗೇರ್‌ನಲ್ಲಿ ನಡೆಯುತ್ತದೆ. ವೇಗವಾಗಿ ಸಾಗುತ್ತಿರುವ ವಾಹನ ರಿವರ್ಸ್ ಮೋಡ್‌ನಲ್ಲಿ ಸಾಗುತ್ತದೆ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.