ವಿದೇಶ:
ವಾರಾಣಸಿ ಸೇರಿದಂತೆ 59 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೈಗೊಂಡಿರುವ ಕೇದರನಾಥ್ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಶನಿವಾರ ಕೇದರನಾಥ ಯಾತ್ರೆ ಕೈಗೊಂಡಿದ್ದ ಮೋದಿ ಇಂದು ಬದ್ರಿನಾಥಕ್ಕೆ ತೆರಳಲಿದ್ದಾರೆ. ಮತದಾನ ನಡೆಯುವ ವೇಳೆ ಈ ರೀತಿ ಪ್ರವಾಸ ಮಾಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಅಲ್ಲದೇ, ಇದು ವಿವಾದಕ್ಕೆ ಕಾರಣವಾಗಿದೆ.
ಕೇದರನಾಥ ಕಾಮಗಾರಿ ವೀಕ್ಷಣೆ ನೆಪದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಯೋಚನೆ ಮೋದಿ ಅವರದು. ಮೋದಿಯ ಈ ಕಾರ್ಯ ಕಾನೂನು ಉಲ್ಲಂಘನೆ ಹಾಗೂ ಅನೈತಿಕವಾಗಿರುವುದು
ಮೋದಿಯವರ ಕೇದರನಾಥ ಯಾತ್ರೆಯನ್ನು ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಚುನಾವಣೆ ಸ್ಪರ್ಧಿಸುತ್ತಿರುವ ಮೋದಿಯವರ ಎರಡುದಿನಗಳ ಕೇದರನಾಥ ಬದ್ರಿನಾಥ ಯಾತ್ರೆಯನ್ನು ರಾಷ್ಟ್ರೀಯ ಮಾಧ್ಯಮ ಸೇರಿದಂತೆ ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದಾರೆ. ಇದು ಮತದಾರರ ಮೇಲೆ ಪ್ರಭಾವ ಬೀರಲಿದೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ.