ಮೈಸೂರು:
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಕಲ್ಕುಣಿಕೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿಯನ್ನು ಲಕ್ಷ್ಮಿ (23) ಎಂದು ಗುರುತಿಸಲಾಗಿದೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಕಲ್ಕುಣಿಕೆಯಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ತಾಲ್ಲೂಕು ಮಂಚಳ್ಳಿ ಗ್ರಾಮದ ನಿವಾಸಿ. 10 ತಿಂಗಳ ಹಿಂದೆ ಹುಣಸೂರಿನ ಯೋಗೇಶ್ ಜೊತೆ ಲಕ್ಷ್ಮೀ ಮದುವೆ ಆಗಿದ್ದಳು. ಮದುವೆ ವೇಳೆ ಲಕ್ಷ್ಮೀ ಕುಟುಂಬದವರು 50 ಲಕ್ಷ ವರದಕ್ಷಿಣೆ, 400 ಗ್ರಾಂ ಚಿನ್ನ ನೀಡಿದ್ದರು.
ಮದುವೆ ನಂತರ ಒಂದು ನಿವೇಶನ ನೀಡಲು ಲಕ್ಷ್ಮೀ ಪೋಷಕರು ಒಪ್ಪಿಕೊಂಡಿದ್ದರು. ಆದರೆ, ನಿವೇಶನ ನೀಡುವುದು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ್ಮಿಗೆ ಯೋಗೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಲಕ್ಷ್ಮಿ ನೇಣಿಗೆ ಶರಣಾಗಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ