ಚಪ್ಪಲಿ ಹಾಕಿಕೂಂಡು ದ್ವಿಚಕ್ರ ವಾಹನ ಓಡಿಸಿದರೆ ಬೀಳುತ್ತೆ ಫೈನ್ !

ಬೆಂಗಳೂರು:

    ಮೋಟಾರು ಕಾಯ್ದೆ ತಿದ್ದುಪಡಿ ಬಳಿಕ ಹಳೆಯ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಚಾರಿ ಪೊಲೀಸರು ಚಿಂತಿಸುತ್ತಿದ್ದಾರೆ.   ದ್ವಿಚಕ್ರ ವಾಹನ ಸವಾರರು ಇನ್ನು ಮುಂದೆ ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿಕೊಂಡು ಗೇರ್ ಹೊಂದಿರುವ ವಾಹನಗಳನ್ನು ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ 1,000 ರೂ ದಂಡ ತೆರಬೇಕಾಗಿರುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ಅಲ್ಲದೆ ಅಪಘಾತವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.  ಈ ನಿಯಮ 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಉಲ್ಲೇಖಿಸಲಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ