ಒಂದೇ ದಿನದಲ್ಲಿ 34 ಸಾವು, 900 ಹೊಸ ಕೇಸ್​… 8 ಸಾವಿರ ಗಡಿ ದಾಟಿದ ಕೋವಿಡ್​​ ಪ್ರಕರಣ!

ನವದೆಹಲಿ: 

   ಕಳೆದ 24 ಗಂಟೆಯಲ್ಲಿ 909 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು,34 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8356 ಆಗಿದ್ದು, ಇದರಲ್ಲಿ 716 ಮಂದಿ ಗುಣಮುಖರಾಗಿರುವ ಕಾರಣ ಸಧ್ಯ ಆಸ್ಪತ್ರೆಗಳಲ್ಲಿ 7367 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

   ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1761 ಕೇಸ್​ಗಳಿದ್ದು, 127 ಸಾವು ಸಂಭವಿಸಿವೆ. ದೆಹಲಿಯಲ್ಲಿ 1069 ಸೋಂಕಿತರಲ್ಲಿ 19 ಸಾವು, ತಮಿಳುನಾಡಿನಲ್ಲಿ 969 ಮಂದಿಗೆ ಸೋಂಕು 12 ಸಾವು, ರಾಜಸ್ಥಾನದಲ್ಲಿ 700 ಸೋಂಕಿತರಲ್ಲಿ 3 ಸಾವು, ಉತ್ತರಪ್ರದೇಶದಲ್ಲಿ 452 ಸೋಂಕಿತರಲ್ಲಿ 45 ಮಂದಿ ಡಿಸ್ಚಾರ್ಜ್​ ಆಗಿದ್ದು 5 ಸಾವು ಸಂಭವಿಸಿವೆ.

  ಉಳಿದಂತೆ ಮಧ್ಯಪ್ರದೇಶದ 532, ತೆಲಂಗಾಣ 504, ಗುಜರಾತ್​​ 432, ಆಂಧ್ರಪ್ರದೇಶ 381, ಕೇರಳ 364 ಕೇಸ್​ ಕಂಡು ಬಂದಿದ್ದು, ಕರ್ನಾಟಕದಲ್ಲಿ 214 ಜನರಲ್ಲಿ ಕೇಸ್​ ಕಾಣಿಸಿಕೊಂಡಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap