ತುಮಕೂರು : ಬೇಜವಾಬ್ದಾರಿ ಕಾಮಗಾರಿ : ಓರ್ವ ವ್ಯಕ್ತಿಗೆ ಗಾಯ

ತುಮಕೂರು:

      ನಗರದಲ್ಲಿ ಒಂದು ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು, ಇನ್ನೊಂದು ಕಡೆ ಮೆಗಾ ಗ್ಯಾಸ್ ಪೈಪ್ ಲೈನ್ ಕಾಮಗಾರಿ, ಮತ್ತೊಂದು ಕಡೆ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಕಾಮಗಾರಿ ಹೀಗೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಇದರ ನಡುವೆ ಕಾಮಗಾರಿಯ ವೇಳೆ ಓರ್ವ ವ್ಯಕ್ತಿಯ ಎದೆಯ ಭಾಗಕ್ಕೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾದ ಘಟನೆ ನಗರದಲ್ಲಿ ನಡೆದಿದ್ದು, ಇದು ಹೆಚ್ಚು ಚರ್ಚೆಗೆ ಒಳಗಾಗಿದೆ.

    ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಶ್ರೀಕೃಷ್ಣ ಚಿತ್ರ ಮಂದಿರದ ಮುಂಭಾಗದಲ್ಲಿ ಮೆಘಾ ಗ್ಯಾಸ್ ಲೈನ್ ವತಿಯಿಂದ ಮನೆಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ನಿಮಿತ್ತ ಪೈಪ್‌ಗಳನ್ನು ಅಳವಡಿಸಲಾಗಿದೆ. ಈ ಪೈಪ್‌ಗಳ ಮೂಲಕ ಗ್ಯಾಸ್ ಸರಬರಾಜು ಆಗಲಿದ್ದು, ಇದನ್ನು ಪರೀಕ್ಷೆ ಮಾಡುವ ವೇಳೆ ಓರ್ವ ವ್ಯಕ್ತಿಗೆ ಗಾಯವಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾನೆ.
ಚಿಲ್ಲರೆ ವ್ಯಾಪಾರಿ ಸರ್ದಾರ್ ಪಾಷಾ ಎಂಬುವರು ಬುಧವಾರ ರಾತ್ರಿ ಸುಮಾರು ೯.೩೦ರ ಸಮಯದಲ್ಲಿ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡಲು ನಿಂತಿದ್ದರು. ಈ ಸಂದರ್ಭದಲ್ಲಿ ಸುಮಾರು ೭೦ ಅಡಿ ದೂರದಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಪರೀಕ್ಷಾರ್ಥವಾಗಿ ವಾಲ್ ತೆರೆದಿದ್ದಾಗ ಅದರಿಂದ ಹೊರಬಂದ ಗ್ಯಾಸ್‌ನ ವೇಗಕ್ಕೆ ಜಲ್ಲಿಕಲ್ಲುಗಳು ಗಾಳಿಯಲ್ಲಿ ಮೇಲೆದ್ದಿವೆ. ಒಂದು ಕಲ್ಲು ಅಲ್ಲಿಯೇ ಇದ್ದ ಜಾಹೀರಾತು ಫಲಕಕ್ಕೆ ತಗುಲಿ ನಂತರ ಅಲ್ಲಿಯೇ ನಿಂತಿದ್ದ ಸರ್ದಾರ್ ಪಾಷಾ ಅವರಿಗೆ ತಗುಲಿದೆ. ತಕ್ಷಣವೆ ಮೂಛೆೆð ಬಂದು ಕೆಳಬಿದ್ದಿದ್ದು ಸ್ಥಳೀಯರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಈ ಸಂಬಂಧ ಮಾತನಾಡಿದ ಇಂತಿಯಾಜ್ ಅಹಮ್ಮದ್ ಖಾನ್, ಕಾಮಗಾರಿಗೆ ಅನುಮತಿ ನೀಡುವ ಇಲಾಖಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಆದರೆ ಕಾಮಗಾರಿ ಮಾಡುವವರು ಅಂತಹ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ ಸ್ಥಳೀಯರ ಮಾತನ್ನು ಲೆಕ್ಕಿಸದೆ ಗ್ಯಾಸ್ ಪೈಪ್ ತೆರೆದಿದ್ದರಿಂದ ಈ ಅನಾಹುತ ಸಂಭವಿಸಿದೆ. ಈಗ ಆತನ ಕುಟುಂಬವನ್ನು ನೋಡಿಕೊಳ್ಳುವವರು ಯಾರು? ಸಂಬಧಪಟ್ಟ ಅಧಿಕಾರಿಗಳು ಕೂಡಲೆ ಈ ಬಗ್ಗೆ ಉತ್ತರಿಸಬೇಕು. ಹಾಗೂ ಕ್ರಮ ಕೈಗೊಳ್ಳಬೇಕು ಎಂದರು.
ಪಟ್ಟಣ ವ್ಯಾಪಾರಿ ಸಮಿತಿಯ ಸದಸ್ಯ ವಸೀಂ ಅಕ್ರಮ್ ಎಂಬುವರರು ಮಾತನಾಡಿ, ಈಗ ಕೊರೋನಾ ಸೋಂಕಿನ ಭೀತಿಯಿಂದ ವ್ಯಾಪಾರ ಕ್ಷೀಣಿಸಿದೆ. ಸಂಜೆ ವೇಳೆಯಲ್ಲಿ ಅಲ್ಪ ಸ್ವಲ್ಪ ಜನ ವ್ಯಾಪಾರ ಮಾಡಲು ಬರುತ್ತಾರೆ. ಜನ ಇಲ್ಲದ ವೇಳೆಯಲ್ಲಿ ಕಾಮಗಾರಿ ಮಾಡಲು ತಿಳಿಸಿದರೂ ಅದನ್ನು ಲೆಕ್ಕಿಸದೆ, ಯಾವುದೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದೆ ಕಾಮಗಾರಿ ಮಾಡಿ ಈ ಅವಘಡಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

     ಈ ಆರೋಪಗಳ ಸಂಬಧ ಪ್ರತಿಕ್ರಿಯೆಗಾಗಿ ಮೆಘಾ ಗ್ಯಾಸ್ ಕಂಪನಿ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮೆಘಾ ಗ್ಯಾಸ್ ಪೈಪ್‌ಲೈನ್ ಮಾಡುವುದರಿಂದ ನಮಗೆ ನಷ್ಟ ಉಂಟಾಗುತ್ತಿದೆ ಎಂದು ಖಾಸಗಿ ಗ್ಯಾಸ್ ಕಂಪನಿಯವರು ತಿಳಿದು ಗುಂಪೊAದು ಎಂಜಿನಿಯರ್ ಅಶೋಕ್ ಮತ್ತು ಅರುಣ್‌ಕುಮಾರ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಸಿದ್ದಗಂಗಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ತಿಳಿಸಿದರು.

    ಇಲ್ಲಿ ನಡೆದಿರುವ ಘಟನೆ ಒಂದಕ್ಕೊದು ಸಂಬಂಧವೇ ಇಲ್ಲವೆಂಬಂತೆ ಆರೋಪ ಪ್ರತ್ಯಾರೋಪಗಳಿಂದ ಕೂಡಿದ್ದು, ನಾಗರಿಕರಲ್ಲಿ ಗೊಂದಲ ಉಂಟಾಗಿದೆ. ಏನೇ ಆಗಲಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇಂತಹ ಘಟನೆಗಳಿಗೆ ಕಾರಣವಾಗುತ್ತಿದ್ದು, ಅಮಾಯಕರು ಬಲಿಯಾಗುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap