ಪಾಕ್​ಗೆ ನೀರು ಹರಿಸದಿರಲು ನಿರ್ಧಾರ…

ನವದೆಹಲಿ :

   ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಭಾರತದ 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಪಾಕ್​ ಉಗ್ರರು ನಡೆಸಿದ ಈ ಭಯೋತ್ಪಾದಕ ದಾಳಿಗೆ ಬೇರೆ ದೇಶಗಳಿಂದಲೂ ವಿರೋಧಗಳು ವ್ಯಕ್ತವಾಗಿತ್ತು. ಪಾಕ್​ನ ಈ ಕೃತ್ಯಕ್ಕೆ ಪ್ರತೀಕಾರವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದ ಭಾರತ ಆ ನಿಟ್ಟಿನಲ್ಲಿ ಜಲಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪಾಕಿಸ್ತಾನಕ್ಕೆ ಹರಿಯುತ್ತಿರುವ ಭಾರತದ 3 ನದಿಗಳ ನೀರನ್ನು ನಿಲ್ಲಿಸಿ ಅದನ್ನು ಯಮುನಾ ನದಿಗೆ ಸೇರುವಂತೆ ಯೋಜನೆಯೊಂದನ್ನು ರೂಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

   ಇಂಡಸ್​ ನೀರು ಒಪ್ಪಂದದ ಅಡಿಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಹರಿಸಲಾಗುತ್ತಿದ್ದ ನಮ್ಮ ಪಾಲಿನ ನೀರನ್ನು ನಿಲ್ಲಿಸಲು ಯೋಚಿಸಿರುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ನಿನ್ನೆ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಸಚಿವ ನಿತಿನ್ ಗಡ್ಕರಿ, ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಪಶ್ಚಿಮ ಭಾರತದ ಮೂರು ಪ್ರಮುಖ ನದಿಗಳಾದ ಇಂಡಸ್​, ಝೀಲಂ ಮತ್ತು ಚೆನಾಬ್​ ನದಿ ನೀರನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ನಿರ್ಧರಿಸಿದೆ. ಪಾಕಿಸ್ತಾನಕ್ಕೆ ಹರಿಸುತ್ತಿದ್ದ ನೀರನ್ನು ನಮ್ಮ ದೇಶದ  ಜಮ್ಮು ಕಾಶ್ಮೀರ ಮತ್ತು ಪಂಜಾಬ್​ನ ಜನರಿಗೆ ತಲುಪುವಂತೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

   ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಾಗಿದ್ದು, ಇದು ಹೊಸ ನಿರ್ಧಾರವಲ್ಲ. ಇದನ್ನು ಈ ಮೊದಲೇ ಮಾಡಬೇಕಾಗಿತ್ತು. ಹಾಗೇ,1960ರಿಂದ ಚಾಲ್ತಿಯಲ್ಲಿರುವ ಸಿಂಧು ನದಿ ಒಪ್ಪಂದ ಮರುಪರಿಶೀಲನೆ ನಡೆಸಲಾಗುವುದು ಎಂದು ಕೂಡ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 2016ರಲ್ಲಿ ಉರಿ ಸೇನಾನೆಲೆಯ ಮೇಲೆ ನಡೆದ ಪಾಕಿಸ್ತಾನದ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಹರಿಸುತ್ತಿದ್ದ ನೀರನ್ನು ನಿಲ್ಲಿಸುವಂತೆ ಭಾರತೀಯರಿಂದ ಒತ್ತಾಯಗಳು ಕೇಳಿಬಂದಿತ್ತು. ಆದರೆ, ಆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ದಿಟ್ಟ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಪುಲ್ವಾಮಾದಲ್ಲಿ ನಡೆದ ದಾಳಿಯ ನಂತರ ಭಾರತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಲ್ಲದೆ, ಭಾರತ ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಸ್ಥಾನಮಾನವನ್ನು ಭಾರತ ಹಿಂಪಡೆದಿದೆ.
    ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಹಿನ್ನೆಲೆಯಲ್ಲಿ ಈಗಾಗಲೇ ಅಣೆಕಟ್ಟು ನಿರ್ಮಾಣ ಕಾರ್ಯವೂ ಆರಂಭವಾಗಿದ್ದು, ರವಿ ನದಿಗೆ ಅಡ್ಡವಾಗಿ ಷಾಪುರ್​-ಕಾಂಡಿಯಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿದೆ ಎಂದು ಕೂಡ ನಿತಿನ್ ಗಡ್ಕರಿ ತಿಳಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap