ರಫೇಲ್​ ದಾಖಲೆ ಕಳುವು : ಮೋದಿ ವಿರುದ್ಧ ದೂರಿಗೆ ರಾಹುಲ್ ಆಗ್ರಹ!!

ನವದೆಹಲಿ:

     ರಫೇಲ್ ಯುದ್ಧ ವಿಮಾನ ಒಪ್ಪಂದದ ಎಲ್ಲದಾಖಲೆಗಳು ನಾಪತ್ತೆಯಾಗಿದೆ ಎಂದು  ಸರ್ಕಾರ ಒಪ್ಪಿಕೊಂಡಿದೆ. ಇದರಲ್ಲಿ  ನರೇಂದ್ರ ಮೋದಿ ಹೆಸರಿದ್ದು, ಈ ಪ್ರಕರಣದ ತನಿಖೆಗೆ ಮುಂದಾಗಬೇಕು. ಮೋದಿ ವಿರುದ್ಧ ದೂರು ದಾಖಲಿಸಬೇಕು ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ

     ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಫೇಲ್​ ಯುದ್ಧ ವಿಮಾನ ಖರೀದಿ ಅವ್ಯವಹಾರದಲ್ಲಿ ಮೋದಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಅವರನ್ನು ನಾವು ತನಿಖೆಗೆ ಒಳಪಡಿಸಬಹುದು.

     ಯುವಜನರಿಗೆ 2 ಕೋಟಿ ಉದ್ಯೋಗ ನೀಡುವ ಭರವಸೆ ಹಾಗೂ ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿ ಮಾತಿಗೆ ತಪ್ಪಿದಂತೆ ರಫೇಲ್​ ದಾಖಲೆಗಳು  ಸಹ  ಕಣ್ಮರೆಯಾಗಿದೆ.

     ದಾಖಲೆಗಳು ಕಳುವಾಗಿದೆ ಎಂದರೆ, ಆ ಮಾಹಿತಿಗಳು ನಿಖರವಾಗಿದ್ದವು. ಇದರಲ್ಲಿ ಮೋದಿ ಹಸ್ತಕ್ಷೇಪ ಮಾಡಿರುವುದು ನಿಜವಾಗಿದೆ. ದಾಖಲೆ ಕಳುವಾಗಿದೆ ಎಂದ ಮೇಲೆ ಕಾನೂನಾತ್ಮಕವಾಗಿ ಸರ್ಕಾರ ಏನು ಮಾಡಬೇಕೊ ಮಾಡಲಿ. ಯಾಕೆ ಅವರು ಇನ್ನು ತನಿಖೆಗೆ ಮುಂದಾಗುತ್ತಿಲ್ಲ. ದಾಖಲೆಯಲ್ಲಿ ಪ್ರಧಾನಿ ಹೆಸರು ಸ್ಪಷ್ಟವಾಗಿ ಉಲ್ಲೇಖಿಸಿರುವಾಗ ಯಾಕೆ ಅಪರಾಧ ತನಿಖೆಗೆ ಮುಂದಾಗಬಾರದು ಎಂದು ಪ್ರಶ್ನಿಸಿದರು

     ಮಾಧ್ಯಮಗಳಿಂದಲೇ ರಫೇಲ್​ ದಾಖಲೆ ಕಳುವಾಗಿದ್ದು, ನಿಮ್ಮ ಮೇಲೆ ತನಿಖೆಗೆ ಮುಂದಾಗಬೇಕು ಎನ್ನುತ್ತಾರೆ. ಆದರೆ 30 ಕೋಟಿ ಹಗರಣದಲ್ಲಿ ದಾಖಲಾದವರ ಮೇಲೆ ತನಿಖೆ ಬೇಡವೇ ಎಂದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap